ಜಗಳೂರು, ಅ.2- ಶ್ರೀ ಕ್ಷೇತ್ರ ಕೊಡದ ಗುಡ್ಡದಲ್ಲಿ ಸಮುದಾಯ ಭವನ, ಸಿಸಿ ರಸ್ತೆ ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ತಾಲ್ಲೂಕಿನ ಕೊಡದಗುಡ್ಡ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ಸ್ವಚ್ಛತಾಹೀ ಸೇವಾ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಅಭಿವೃದ್ದಿಗೆ ವೈಯಕ್ತಿಕವಾಗಿ 11 ಲಕ್ಷ ದೇಣಿಗೆಯನ್ನು ಹಂತ ಹಂತವಾಗಿ ನೀಡಲಾಗು ವುದು. ವಿವಿಧ ವಸತಿ ಯೋಜ ನೆಯಡಿ ತಾಲ್ಲೂಕಿಗೆ ಶೀಘ್ರದಲ್ಲಿ 500 ಮನೆ ಗಳು ಮಂಜೂರಾಗಲಿವೆ. ಅರ್ಹರಿಗೆ ಸೂರು ಕಲ್ಪಿಸಲಾಗುವುದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣಗಳು ನಡೆಯದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆ ಯರು ಜವಾಬ್ದಾರಿ ನಿಭಾಯಿಸಬೇಕು. ಶಾಲಾ ಮಕ್ಕಳಿಗೆ ಶಿಕ್ಷಕರು ಗಾಂಧೀಜಿ ಹಾಗೂ ಮಹನೀಯರ ಜೀವನ ಚರಿತ್ರೆ ತಿಳಿಸುವ ಮೂಲಕ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಅಸಗೋಡು ವಡ್ಡರಹಟ್ಟಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ಸಾವನ್ನಪ್ಪಿ ರುವುದು ಹೃದಯವಿದ್ರಾವಕ ಘಟನೆ. ಎಲ್ಲಿಯೂ ಇಂತಹ ಘಟನೆಗಳು ಮರುಕಳಿಸದಂತೆ ಪೋಷಕರು ಜಾಗೃತ ರಾಗಬೇಕು. ಅತಿವೃಷ್ಟಿ ಯಿಂದ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು, ದಸರಾ ರಜಾ ದಿನಗಳಲ್ಲಿ ಮಕ್ಕಳ ಚಲನವಲನ ಬಗ್ಗೆ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ಅಮೃತ ಗ್ರಾಮ ಯೋಜನೆ ಯಡಿ ವಿವಿಧ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಶಾಸಕ ರು ವಿತರಿಸಿದರು.
ಸಮಾರಂಭದಲ್ಲಿ ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ, ತಾ.ಪಂ ಇಓ ಕೆಂಚಪ್ಪ, ಬಿಇಓ ಹಾಲಮೂರ್ತಿ, ಗ್ರಾ.ಪಂ ಅಧ್ಯಕ್ಷೆ ರಣದಮ್ಮ, ಉಪಾಧ್ಯಕ್ಷ ವೀರೇಶ್, ಸದಸ್ಯರಾದ ಬಸವಾಪುರ ರವಿಚಂದ್ರ, ಅಂಜಿನಪ್ಪ, ಗುರುಸ್ವಾಮಿ, ಸದಾ ಶಿವಪ್ಪ, ಎಇಇ ಸಾಧಿಕ್ ಉಲ್ಲಾ, ಶಿವಮೂರ್ತಿ, ನಾಗರಾಜ್, ಸಿಡಿಪಿಓ ಬೀರೇಂದ್ರ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಶಂಕರ್, ಪಿಡಿಓ ಸುನಿತಾ, ವಾಸುದೇವ, ಮುಖಂಡ ರಾದ ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ ಇದ್ದರು.