ದಾವಣಗೆರೆ, ಅ.2- ನಗರದ ಜನಪ್ರಿಯ ಕ್ರಿಕೆಟ್ ಕ್ಲಬ್ ವತಿಯಿಂದ ಪ್ರೀಮಿಯರ್ ಲೀಗ್ – 2024 ಪಂದ್ಯಾವಳಿಯು ಎರಡನೇ ಬಾರಿಗೆ ಇಂದಿನಿಂದ ಇದೇ ದಿನಾಂಕ 6ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಾಡಾಗಿದೆ.
ಪ್ರೀಮಿಯರ್ ಲೀಗ್ ಅಂಗವಾಗಿ ಕಲಾ ತಂಡಗಳೊಂದಿಗೆ ಆಟಗಾರರು ಇಂದು ಮೆರವಣಿಗೆ ನಡೆಸಿದರು. ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ರಾಜಬೀದಿಗಳ ಮುಖಾಂತರ ಜಿಲ್ಲಾ ಕ್ರೀಡಾಂಗಣವನ್ನು ತಲುಪಿತು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮೇಯರ್ ಕೆ. ಚಮನ್ ಸಾಬ್, ದಾನಿಗಳಾದ ಶಿವಗಂಗಾ ಶ್ರೀನಿವಾಸ್, ಕುರುಡಿ ಗಿರೀಶ್, ಡಿ.ಎಲ್. ಶಿವಪ್ರಕಾಶ್ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು ಎಂದು ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಸಹ ಕಾರ್ಯದರ್ಶಿ ಜಯಪ್ರಕಾಶ್ ಗೌಡ ತಿಳಿಸಿದ್ದಾರೆ.