ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಶಿವಯೋಗಾಶ್ರಮದ ಆವರಣದಲ್ಲಿ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 68 ನೇ ಸ್ಮರಣೋತ್ಸವ, ರಥೋತ್ಸವ ಹಾಗೂ ವಚನ ಗ್ರಂಥ ಮೆರವಣಿಗೆ ಏರ್ಪಡಿಸಲಾಗಿದೆ. ಶ್ರೀ ಬಸವ ಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಚನ್ನಗಿರಿ ಮಹಾಂತೇಶ್ ಶಾಸ್ತ್ರಿಗಳಿಂದ `ಶ್ರೀ ಜಯದೇವ ಲೀಲೆ’ ಪ್ರವಚನ, ಮಧ್ಯಾಹ್ನ 1 ಗಂಟೆಗೆ ಮಹಾ ದಾಸೋಹ, ಸಂಜೆ 5 ಗಂಟೆಗೆ 68 ನೇ ವರ್ಷದ ರಥೋತ್ಸವ, ವಚನಗ್ರಂಥ ಮೆರವಣಿಗೆ, ಸಂಜೆ 6 ಗಂಟೆಗೆ ವಚನ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.
January 10, 2025