ಸ್ವಂತ ಕಟ್ಟಡದಲ್ಲಿ ಶ್ರೀ ವೀರಮಾಹೇಶ್ವರ ಕ್ರೆಡಿಟ್ ಸೊಸೈಟಿ

ಸ್ವಂತ ಕಟ್ಟಡದಲ್ಲಿ ಶ್ರೀ ವೀರಮಾಹೇಶ್ವರ ಕ್ರೆಡಿಟ್ ಸೊಸೈಟಿ

ಸಂಘದ ವಾರ್ಷಿಕ ಮಹಾಸಭೆಯಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಂತಸ

ದಾವಣಗೆರೆ, ಸೆ. 29 – ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸದಸ್ಯರ, ದಾನಿಗಳ, ಷೇರುದಾರರ, ಗ್ರಾಹಕರ ಸಹಕಾರದಿಂದಲೇ ಸ್ವಂತ ಕಟ್ಟಡ ನಿರ್ಮಾಣ ಮಾಡಿರುವುದು ಇಡೀ ಜಂಗಮ ಸಮಾಜ ಹೆಮ್ಮೆಯ ಪಡುವಂತಹ ವಿಷಯ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ವೀರಮಾಹೇಶ್ವರ ಕೋ – ಆಪರೇಟಿವ್ ಸೊಸೈಟಿಯ 28ನೇ ವಾರ್ಷಿಕ ಮಹಾ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

 ಜಂಗಮ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದೆ, ಇದು ಮುಂದಿನ ಪೀಳಿಗೆಗೆ ಮಾರಕವಾಗಬಹುದು. ಆಚಾರ-ವಿಚಾರ, ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಸಮಾಜ ಶ್ರಮಿಸಲಿ ಎಂದು ಜಂಗಮ ಸಮಾಜಕ್ಕೆ ಕರೆ ಕೊಟ್ಟರು. 

ಸಂಘದ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ ಮಾತನಾಡಿ, 2023-24ನೇ ಸಾಲಿನಲ್ಲಿ ಸಂಘವು  78,37,778-00 ಲಕ್ಷ ರೂ. ಲಾಭ ಗಳಿಸಿದ್ದು, ಕೊಡಬೇಕಾದ ಎಲ್ಲಾ ಮೊತ್ತವನ್ನು ಕೊಟ್ಟು 14,51,437 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಘವು ರೂ. 46,29,635 ಷೇರು ಬಂಡವಾಳ, 5,39,39,388-13 ಠೇವಣಿ ಹೊಂದಿದ್ದು, 3,67,97,808-20 ಸಾಲ ಒದಗಿಸಲಾಗಿದೆ.   ಶೇ. 12ರಷ್ಟು ಡಿವಿಡೆಂಡ್ ನೀಡುವುದಾಗಿ ಅವರು ಘೋಷಿಸಿದರು.

ಎಸ್.ಆರ್.ಪಿ. ಶಾಲಾ ಮಕ್ಕಳು ಪ್ರಾರ್ಥಿಸಿ ದರು. ಎಲ್.ಎಂ.ಆರ್. ಬಸವರಾಜಯ್ಯ ಸ್ವಾಗತಿ ಸಿದರು. ಕಾರ್ಯದರ್ಶಿ ನಾಗರಾಜಯ್ಯ ಐನಳ್ಳಿ ಮಠದ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಮನ್ ಕಟಗಿಹಳ್ಳಿ ಮಠ  ವಂದಿಸಿದರು.

ಸಂಘದ ಉಪಾಧ್ಯಕ್ಷ ಪಂಚಾಕ್ಷರಯ್ಯ ಬಸಾಪುರ, ನಿರ್ದೇಶಕ ಎಲ್‍ಎಂ.ಆರ್. ಬಸವರಾಜಯ್ಯ, ಬಿ.ಎಂ. ರವಿ, ಆರ್.ಎಂ. ವೀರಯ್ಯ, ಎಸ್.ಎಂ. ವೀರೇಂದ್ರ, ವೃಷಭೇಂದ್ರ ಸ್ವಾಮಿ, ಶ್ರೀಮತಿ ತಾರಾ, ಶ್ರೀಮತಿ ರೇಖಾ, ಶ್ರೀಮತಿ ಸುಮನ್ ಕಟಗಿಹಳ್ಳಿ ಮಠ, ಚನ್ನಬಸವ ಶರ್ಮ, ವಿಶೇಷ ಆಹ್ವಾನಿತ ಎಸ್.ಕೆ. ರಾಜಕುಮಾರ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!