ದಾವಣಗೆರೆ, ಸೆ. 29 – ನಗರದ ಕೆ.ಇ.ಬಿ. ಸಮುದಾಯ ಭವನದಲ್ಲಿ ನಡೆದ ಮೂರನೇ ರಾಷ್ಟ್ರೀಯ ಮಾಸ್ಟರ್ಸ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 81 ಕೆ.ಜಿ. ವಿಭಾಗದಲ್ಲಿ ಕರಿಬಸಪ್ಪ ಬಿ.ವಿ. ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಕರಿಬಸಪ್ಪ ಬಿ.ವಿ. ಅವರಿಗೆ ಕರ್ನಾಟಕ ರಾಜ್ಯದ ವೇಯ್ಟ್ ಲಿಫ್ಟಿಂಗ್ ಉಪಾಧ್ಯಕ್ಷ ಹೆಚ್. ಬಸವರಾಜ್, ಜಿಲ್ಲಾ ವೇಯ್ಟ್ ಲಿಫ್ಟಿಂಗ್ ಅಧ್ಯಕ್ಷ ಹೆಚ್. ಮಹೇಶಣ್ಣ, ಪಾಲಿಕೆ ಸದಸ್ಯ ವೀರೇಶ್ ಪೈಲ್ವಾನ್, ಎಸ್. ಕೆ. ಪಾಂಡುರಾಜ್, ಮಹಾನಗರ ಪಾಲಿಕೆ ಜಿಮ್ ತರಬೇತುದಾರ ಹನುಮಂತಪ್ಪ ಅಭಿನಂದಿಸಿದರು.
ಬಿ.ವಿ. ಕರಿಬಸಪ್ಪ ಅವರಿಗೆ ಚಿನ್ನದ ಪದಕ
