ದಾವಣಗೆರೆ, ಸೆ. 27- ನಗರದ ಲೆನಿನ್ ನಗರದಲ್ಲಿರುವ ಕಲ್ಪತರು ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಅಧ್ಯಕ್ಷರಾಗಿ ಡಿ.ಎನ್. ಜಗದೀಶ ಹಾಗೂ ಉಪಾಧ್ಯಕ್ಷರಾಗಿ ಡಾ. ಕೆ. ಕೃಷ್ಣೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರಾದ ಭಾಗ್ಯಶ್ರೀ ಎಸ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರು ಆಯ್ಕೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಅರಣಿ ತಿಮ್ಮಯ್ಯ, ನಿರ್ದೇಶಕರಾದ ಬಿ.ಎನ್. ಮಲ್ಲೇಶ್, ಸಿ. ಕಪನಿಗೌಡ, ಟಿ. ಗೋಪಿನಾಥ್, ಎಸ್. ಚಿದಾನಂದ್, ಜ್ಯೋತಿ ಪ್ರಸನ್ನಕುಮಾರ್, ಕಮಲಮ್ಮ ಭೈರಪ್ಪ, ಎಸ್. ನಾಗರಾಜ್, ಎಸ್. ಸುಧಾ ಮತ್ತಿತರರು ಉಪಸ್ಥಿತರಿದ್ದರು.