ಮಲೇಬೆನ್ನೂರು ಸಮೀಪದ ಹಿಂಡಸಘಟ್ಟ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಿ. ಅರುಣ್ ಕುಮಾರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ಸಾಧನೆಯನ್ನು ಗುರುತಿಸಿ, `ರಾಷ್ಟ್ರೀಯ ವಿಶ್ವಕರ್ಮ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವದೆಹಲಿಯಲ್ಲಿ ಇಂದು ನಡೆಯಲಿರುವ ವಿಶ್ವಕರ್ಮ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇಡೀ ಭಾರತ ದೇಶದಾದ್ಯಂತ 25 ಸಾಧಕರನ್ನು ಗುರುತಿಸಿದ್ದು, ಅದರಲ್ಲಿ ಶಿಕ್ಷಕ ಬಿ ಅರುಣಕುಮಾರ್ ಒಬ್ಬರಾಗಿದ್ದಾರೆ. ಇದೇ ಸೆ.5 ರಂದು ನಡೆದ ಶಿಕ್ಷಕ ದಿನಾಚರಣೆಯಲ್ಲಿ ಕರ್ನಾಟಕ ಸರ್ಕಾರವು `ಉತ್ತಮ ರಾಜ್ಯ ಶಿಕ್ಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದು.