ಹಸಿರು ನಗರವಾಗಿಸಲು ಪಾಲಿಕೆ ವ್ಯಾಪ್ತಿಯಲ್ಲಿ ವರ್ಷಕ್ಕೆ ಲಕ್ಷ ಸಸಿ ನೆಡುವ ಗುರಿ : ಡಿಸಿ

ಹಸಿರು ನಗರವಾಗಿಸಲು ಪಾಲಿಕೆ ವ್ಯಾಪ್ತಿಯಲ್ಲಿ ವರ್ಷಕ್ಕೆ ಲಕ್ಷ ಸಸಿ ನೆಡುವ ಗುರಿ : ಡಿಸಿ

 ದಾವಣಗೆರೆ, ಸೆ. 27 – ದಾವಣಗೆರೆ ಸ್ಮಾರ್ಟ್‍ಸಿಟಿಯಾಗಿದ್ದು ಇದನ್ನು ಹಸಿರು ನಗರವಾಗಿಸಲು ಪ್ರತಿ ವರ್ಷ ವಿವಿಧ ಜಾತಿಯ ಲಕ್ಷ ಗಿಡಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು. 

ನಗರದ ಶಿವ ಪಾರ್ವತಿ ಬಡಾವಣೆ, ಜೆ.ಹೆಚ್. ಪಟೇಲ್ ಬಡಾವಣೆ ಹಾಗೂ ಬನಶಂಕರಿ ಬಡಾವಣೆಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರ ಜನ್ಮ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯಿಂದ ಏರ್ಪಡಿಸಲಾದ ಸಸಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಉತ್ತಮ ಆರೋಗ್ಯಕ್ಕೆ ಶುದ್ದ ಗಾಳಿ ಸಿಗಬೇಕು, ಹಸಿರು ನಗರವಾಗಿ ಪರಿವರ್ತನೆಯಾಗಬೇಕೆಂದು ನಗರ ವ್ಯಾಪ್ತಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲು, ಅದರಲ್ಲಿಯು ಹೆಚ್ಚು ಆಕ್ಸಿಜನ್ ಉತ್ಪಾದಿಸುವ ಮರ, ಗಿಡಗಳನ್ನು ಬೆಳೆಸ ಲಾಗುತ್ತದೆ. ಈ ಗಿಡಗಳನ್ನು ಪೋಷಿಸಲು ಸ್ಥಳೀಯ ನಿವಾಸಿಗಳು ಸಹ ಕೈಜೋಡಿಸಿ ಬೆಳೆಸಬೇಕು, ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು. 

 ಈ ನಾಲ್ಕು ಬಡಾವಣೆಗಳಲ್ಲಿ ಬೇವು, ಅರಳಿ, ಹೊಂಗೆ ಸೇರಿದಂತೆ 5400 ಗಿಡಗಳನ್ನು ನೆಡಲಾಗಿದೆ. ಮುಂದಿನ ವರ್ಷ ಮುಂಗಾರು ಹಂಗಾಮು ಆರಂಭವಾದ ತಕ್ಷಣ ಗಿಡಗಳನ್ನು ನೆಡಲು ಕ್ರಮವಹಿಸಲಾಗುತ್ತದೆ. ಇದರಿಂದ ಹೆಚ್ಚು ಗಿಡಗಳು ಉಳಿಯಲಿವೆ ಎಂದ ಅವರು ಶಿವಪಾರ್ವತಿ ಬಡಾವಣೆಯಲ್ಲಿ ಬೀದಿ ದೀಪ, ಒಳಚರಂಡಿ ವ್ಯವಸ್ಥೆ ಬಗ್ಗೆ ತಿಳಿಸಿದ್ದು ಪಾಲಿಕೆಯಿಂದ ಕ್ರಮ ವಹಿಸಲಾಗುತ್ತದೆ ಎಂದರು. 

  ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ರೈತ ಮುಖಂಡ ಬಲ್ಲೂರು ರವಿಕುಮಾರ್, ಬಡಾವಣಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಜಯಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ನಾಯಕ್  ಹಾಗೂ ವಿವಿಧ ನಿವಾಸಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. 

error: Content is protected !!