ಸಂಘವು 6.97 ಕೋಟಿ ಆದಾಯ ಗಳಿಸಿದೆ : ಕೆ.ಎಸ್. ಶಿವಕುಮಾರ್ ಕಮ್ಮಾರಗಟ್ಟೆ
ಹೊನ್ನಾಳಿ, ಸೆ. 27 – ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ವಾರ್ಷಿಕ 208.73 ಕೋಟಿ ರೂ. ವಹಿವಾಟು ನಡೆಸಿದ್ದು, 6.27 ಕೋಟಿ ಆದಾಯವನ್ನು ಗಳಿಸಿದ್ದು, ಪ್ರಸಕ್ತ ಸಾಲಿಗೆ 56.12 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ಶಿವಕುಮಾರ್ ಕಮ್ಮಾರಗಟ್ಟೆ ಹೇಳಿದರು.
ತಾಲ್ಲೂಕಿನ ಗೊಲ್ಲರಹಳ್ಳಿಯಲ್ಲಿರುವ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಸೊಸೈಟಿಯ 24ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮಾಡುವುದು, ಅನುತ್ಪಾದಕ ಆಸ್ತಿ ಕಡಿಮೆ ಮಾಡುವುದು ಹಾಗೂ ಸಂಘದ ವಹಿವಾಟು ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು. ಸಂಘದ ಶೇರುದಾರರಿಗೆ ಶೇ.12 ರಷ್ಟು ಲಾಭಾಂಶವನ್ನು ವಿತರಣೆ ಮಾಡಲಾಗುವುದು ಎಂದರು.
ಸದಸ್ಯರ ಕ್ಷೇಮ ನಿಧಿಯಿಂದ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ 5 ಸಾವಿರ ನೀಡಲಾಗುತ್ತಿದ್ದು, ಮರಣ ಹೊಂದಿದ ಒಟ್ಟು 46 ಕುಟುಂಬಗಳಿಗೆ 2.24 ಲಕ್ಷ ಸಂದಾಯ ಮಾಡಲಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಹೆಚ್.ಎನ್.ರುದ್ರೇಶ್ ಅವರು, 2023-24 ನೇ ಸಾಲಿನ ಆಡಿಟ್ಟಾದ ಜಮಾ – ಖರ್ಚು, ಲಾಭ – ನಷ್ಟ, ಆಸ್ತಿ ಜವಾಬ್ದಾರಿ ತಃಖ್ತೆಯನ್ನು ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಂಡರು.
ವಾರ್ಷಿಕ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎನ್.ಬಸವರಾಜ್, ನಿರ್ದೇಶಕರಾದ ಪಿ.ಬಿ.ಶೈಲೇಶ್, ಪಿ.ಚಂದ್ರಪ್ಪ, ಎಂ.ಸತೀಶ್, ಬಿ.ಕೆಂಚಪ್ಪ, ಆರ್.ಶಂಕರಗೌಡ, ಡಿ.ಜಿ.ಎನ್.ಚನ್ನ ವೀರಪ್ಪ, ಕೆ.ಜಿ.ಕರಿಬಸಪ್ಪ, ಜಿ.ಎಸ್.ಬಸವನ ಗೌಡ, ಎನ್.ಕೃಷ್ಣಾನಾಯ್ಕ, ಜಿ.ಯಶೋಧಮ್ಮ, ಕೆ.ಜಿ.ಮಂಜುಳಾ, ಮಾಜಿ ಅಧ್ಯಕ್ಷ ಶ್ರೀಕಾಂತ್ ನ್ಯಾಮತಿ ಹಾಗೂ ಸಂಘದ ಕಾರ್ಯದರ್ಶಿ ಹೆಚ್.ಎನ್. ರುದ್ರೇಶ್ ಉಪಸ್ಥಿತರಿದ್ದರು.