ಹರಿಹರದಲ್ಲಿ ನಾಳೆ ಹಿಂದೂ ಮಹಾಗಣಪತಿ ವಿಸರ್ಜನೆ : ಬೃಹತ್ ಶೋಭಾಯಾತ್ರೆ

ಹರಿಹರದಲ್ಲಿ ನಾಳೆ  ಹಿಂದೂ ಮಹಾಗಣಪತಿ ವಿಸರ್ಜನೆ : ಬೃಹತ್ ಶೋಭಾಯಾತ್ರೆ

ಹರಿಹರ, ಸೆ.26- ನಗರದಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನೆ, ಶೋಭಾಯಾತ್ರೆ ನಾಡಿದ್ದು ದಿನಾಂಕ 29 ರಂದು ಭಾನುವಾರ ನಡೆಯಲಿದೆ ಎಂದು ಹಿಂದೂ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಬಸವನಗೌಡ ತಿಳಿಸಿದರು.

ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸೇವಾ ಟ್ರಸ್ಟ್ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.  

ಹಿಂದೂ ಮಹಾಗಣಪತಿ ಮತ್ತು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಕಳೆದ 5 ವರ್ಷಗಳಿಂದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಶೋಭಾಯಾತ್ರೆಯಲ್ಲಿ ಎರಡು ಡಿಜೆ ಪುರುಷರಿಗೆ ಮತ್ತು ಮಹಿಳೆಯರಿಗೆ ಒಂದು ಪ್ರತ್ಯೇಕ ಡಿಜೆ ಸೌಂಡ್ ಸಿಸ್ಟಮ್, ಸಮಾಳ ನಂದಿಕೋಲು, ಗೊಂಬೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಮೇಳಗಳೊಂದಿಗೆ ಪೇಟೆ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗದಿಂದ ಆರಂಭಗೊಳ್ಳಲಿದೆ.

ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಸಂಚಾಲಕ ದಿನೇಶ್ ಮಾತನಾಡಿ, 27 ರ ಶುಕ್ರವಾರ ಮಧ್ಯಾಹ್ನ  3 ಗಂಟೆಗೆ ಬೃಹತ್ ಬೈಕ್ ರಾಲಿ ಹಮ್ಮಿಕೊಳ್ಳಲಾಗಿದೆ. 28 ರ ಶನಿವಾರ ರಾತ್ರಿ 8 ಗಂಟೆಗೆ ಗಣಪತಿ ಪೆಂಡಾಲ್ ಆವರಣದಲ್ಲಿ ಲಕ್ಕಿ ಡಿಪ್ ಲಾಟರಿ ಬಹುಮಾನ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಮಾಜಿ ನಾಮನಿರ್ದೇಶನ ಸದಸ್ಯ ಹೆಚ್.ಎಸ್. ರಾಘವೇಂದ್ರ ಮಾತನಾಡಿ,  29 ರಂದು ನಡೆಯುವ ಬೃಹತ್ ಶೋಭಾಯಾತ್ರೆ ಮೆರವಣಿಗೆಗೆ ನಾಡಿನ ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಂಜುಮಾನ್ ಇಸ್ಲಾಮಿಯಾ ಸಮಿತಿಯವರು ಸೇರಿದಂತೆ, ಎಲ್ಲರಿಗೂ ಆಹ್ವಾನ ನೀಡಲಾಗಿದೆ. 

ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣೆ, ಸಂಜೆ ದೋಸೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಸ್ವಾತಿ ಹನುಮಂತಪ್ಪ ಮಾತನಾಡಿ, ಶೋಭಾಯಾತ್ರೆ ಮೆರವಣಿಗೆ ಹಾದು ಹೋಗುವ ದಾರಿಯಲ್ಲಿ ಕೇಸರಿ ಬಣ್ಣದ ಬಾವುಟ, ವೀರ ಪುರಷರ ಪೋಟೋ, ಕೇಸರಿ ಬಟ್ಟೆಗಳನ್ನು ಕಟ್ಟಿ ವಿದ್ಯುತ್ ದ್ವೀಪಗಳಿಂದ ನಗರವನ್ನು ಶೃಂಗರ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ರಟ್ಟಿಹಳ್ಳಿ ಮಂಜುನಾಥ್, ಚಂದ್ರಕಾಂತ ಗೌಡ, ಚಂದನ್ ಮೂರ್ಕಲ್, ಸುನಾಮಿ ರಮೇಶ್, ಸಂತೋಷ ಗುಡಿಮನಿ, ನಿತ್ಯನಂದ, ಮಹೇಶ್, ಕುಮಾರ್, ಅದ್ವೈತ ಶಾಸ್ತ್ರಿ, ಗಿರೀಶ್ ಗೌಡ ಇತರರು ಹಾಜರಿದ್ದರು. 

error: Content is protected !!