ದಾವಣಗೆರೆ, ಸೆ. 27 – ಕರ್ನಾಟಕ ರಾಜ್ಯ ಪ್ರೊಫೇಷನಲ್ ಸೋಶಿಯಲ್ ವರ್ಕರ್ ವೆಲ್ಫೇರ್ ಅಸೋಸಿಯೇಷನ್ ರಾಜ್ಯ ಸಮಿತಿ ವತಿಯಿಂದ ಗಾಂಧಿ ಭವನದಲ್ಲಿ ಸೇವಾ ಮನೋಭಾವ ಎಂಬ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಉಪನ್ಯಾಸಕ ಕೆ. ಮಂಜುನಾಥ್ ಅವರು ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಸೇವೆಯನ್ನು ಮಾಡಲು ಶಾಂತಿ, ನೀತಿ, ನ್ಯಾಯ ಎಂಬ ಮೂರು ಅಂಶಗಳು ಇದ್ದರೆ ಮಾತ್ರ ನಮ್ಮಿಂದ ಸೇವೆ ಮಾಡಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಗಾಂಧೀಜಿಯವರು ಸೇವೆ ಮಾಡಿದ್ದರಿಂದ ಮಹಾತ್ಮಾ ಎನಿಸಿಕೊಂಡರು ಎಂದು ತಿಳಿಸಿದರು.
ದಾವಣಗೆರೆ ಭಾರತ ಸೇವಾದಳದ ಜಿಲ್ಲಾ ಸಂಘಟಕರಾದ ಪಕ್ಕೀರಗೌಡ, ಕವಿ, ಸಾಹಿತಿ ಶಿವಪ್ರಸಾದ ಕರ್ಜಗಿ ಮಾತನಾಡಿದರು.
ರಾಜ್ಯಾಧ್ಯಕ್ಷರಾದ ಸಂತೋಷ ಕುಮಾರ್ ಅವರು ಅಸೋಸಿಯೇಷನ್ನಿನ ಕಾರ್ಯ ಚಟುವಟಿಕೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷರಾದ ಮಹಾಲಿಂಗಪ್ಪ, ರಾಜ್ಯ ಕಾರ್ಯದರ್ಶಿ ಚಂದನ್, ಮತ್ತು ರಾಜ್ಯ ನಿರ್ದೇಶಕರಾದ ಶ್ರೀಮತಿ ಪ್ರತಿಭಾ, ಶೃತಿ ರೆಡ್ಡಿ, ಅಂಜಿನಪ್ಪ, ರಕ್ಷಿತ್ ಗೌಡ, ಶ್ವೇತಾ ಹಾಗೂ ಮಧು ಪಿ. ಇತರರು ಹಾಜರಿದ್ದರು