ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಪಿ.ಮಹಾಬಲೇಶ್ವರಗೌಡ
ಹರಪನಹಳ್ಳಿ, ಸೆ. 26- ಯುವ ಸಮೂಹ ಹೆಚ್ಚೆಚ್ಚು ರಕ್ತದಾನಕ್ಕೆ ಮುಂದಾಗುವ ಮೂಲಕ ಮನುಷ್ಯನ ಅಮೂಲ್ಯ ಜೀವ ಉಳಿವಿಕೆಗೆ ಕಾರಣರಾಗಬೇಕು ಎಂದು ಎಚ್ಪಿಎಸ್ ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹಾಬಲೇಶ್ವರಗೌಡ ಹೇಳಿದರು.
ಪಟ್ಟಣದ ಶ್ರೀ ತರಳಬಾಳು ಜಗದ್ಗುರು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿರಿಗೆರೆ ತರಳಬಾಳು
ಮಠದ ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮೀಜಿಯವರ 32ನೇ ಪುಣ್ಯಸ್ಮರಣೆ ಪ್ರಯುಕ್ತ ಎಚ್ಪಿಎಸ್ ಪ್ರಥಮ ದರ್ಜೆ ಕಾಲೇಜು, ಸಾರ್ವಜನಿಕ ಆಸ್ಪತ್ರೆ, ಹರಪನಹಳ್ಳಿ ಹಾಗೂ ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು ರಕ್ತದಾನ ಮಾಡುವುದರಿಂದ ಮನುಷ್ಯ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ಸಿ.ಸಿದ್ದಪ್ಪ, ಗುಂಡಗತ್ತಿ ಮಂಜುನಾಥ, ಕೆ.ಜಿ.ಶಿವಯೋಗಿ, ವಾಮನಗೌಡ, ಗೋಪಾಲ ರೆಡ್ಡಿ, ಸಿ.ಎಸ್.ಬಸವರಾಜಪ್ಪ, ಡಾ.ಮಂಜುನಾಥ, ಡಾ.ಮುತ್ತೇಶ, ಪ್ರಾಚಾರ್ಯ ಗುರುದೇವ, ಜಿ.ತಿಪ್ಪೇಶ, ಪ್ರಭುದೇವ, ಸಂಗಮೇಶ್ವರ, ಎಂ.ಶಿವಕುಮಾರ್, ಎಂ.ಆನಗೋಡಿ, ವಾಗೀಶ, ಟಿ.ತಿರುಮಲೇಶ, ವಾಗ್ದೇವಿ ಸಿ.ರವಿಕುಮಾರ್, ವೀರಭದ್ರಚಾರ್ಯ, ಟಿ.ಚಂದ್ರಪ್ಪ, ನರೇಶಪ್ಪ, ಸೇರಿದಂತೆ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.