ಹರಪನಹಳ್ಳಿ : ಬಾಗಳಿ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಹರಪನಹಳ್ಳಿ : ಬಾಗಳಿ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಹರಪನಹಳ್ಳಿ.ಸೆ.25- ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಖೋ ಖೋ ಪಂದ್ಯಾ ವಳಿಯಲ್ಲಿ  ಬಾಗಳಿ ಡಾ. ಅಂಬೇಡ್ಕರ್ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕುಂಚೂರು ವಲಯ ಶಾಲೆಯ ವಿದ್ಯಾ ರ್ಥಿಗಳ ಖೋ ಖೋ ತಂಡದ ವಿರುದ್ದ ಬಾಗಳಿ  ಡಾ.ಅಂಬೇಡ್ಕರ್  ಹಿರಿಯ  ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು  ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಬಿಇಓ ಲೇಪಾಕ್ಷಪ್ಪ, ಬಿಆರ್‍ಸಿ, ಸಿಆರ್‍ಪಿ, ಹಾಗೂ ಶಾಲೆಯ ಮುಖ್ಯ ಶಿಕ್ಷಕ ಪೂಜಾರ ಮಂಜಪ್ಪ, ಶಿಕ್ಷಕರಾದ  ಸಿ. ನಾಗರಾಜ್, ಬಿ.ಎಸ್.ರಾಮಚಂದ್ರಪ್ಪ, ಟಿ.ಕೆ.ಎಂ.ಮಂಜುನಾಥ್ ಮತ್ತಿತರರು ಅಭಿನಂದಿಸಿದ್ದಾರೆ.

error: Content is protected !!