ಮಲೇಬೆನ್ನೂರು, ಸೆ. 26 – ಹರಳಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲನಾಯಕನಹಳ್ಳಿ, ಗುಳದಹಳ್ಳಿ, ಸಂಕ್ಲೀಪುರ ಹಾಗೂ ಶ್ರೀನಿವಾಸ ನಗರ ಕ್ಯಾಂಪಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಹರಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯ್ತಿ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೆಚ್.ಎಂ.ಹನುಮಂತಪ್ಪ, ಸದಸ್ಯರಾದ ಫಕ್ಕೀರಪ್ಪ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ, ಸಿಆರ್ಪಿ ಸತೀಶ್, ತಾ. ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ.ಮಂಜಪ್ಪ, ಮುಖ್ಯೋಪಾಧ್ಯಾಯರಾದ ಹೆಚ್.ಶಿವಣ್ಣ, ಆರ್.ಆರ್.ಮಠದ್ ಹಾಗೂ ಇತರರು ಹಾಜರಿದ್ದರು.
January 23, 2025