ಎಲೆಬೇತೂರು : ರಂಗಕರ್ಮಿ ದ್ಯಾಮೇಶ ಅವರಿಗೆ ಸನ್ಮಾನ

ಎಲೆಬೇತೂರು : ರಂಗಕರ್ಮಿ ದ್ಯಾಮೇಶ ಅವರಿಗೆ ಸನ್ಮಾನ

ದಾವಣಗೆರೆ, ಸೆ. 26 – ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಶಿಕ್ಷಕ ಎಚ್.ಎಸ್. ದ್ಯಾಮೇಶ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಕೊಡ ಮಾಡುವ 2024-25ನೇ ಸಾಲಿನ ವಾರ್ಷಿಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ರಂಗಭೂಮಿ ಕಲಾವಿದ, ನಿರ್ದೇಶಕ, ರಂಗ ಸಂಘಟಕ, ನಾಟಕ ರಚನೆ, ಸಂಚಾಲಕರಾಗಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ, ರಂಗಪ್ರಯೋಗ ಶಾಲೆ, ಶಿವಸಂಚಾರ ರೆಪರ್ಟರಿ, ಭಾರತ ಸಂಚಾರ, ಶಿವದೇಶ ಸಂಚಾರ ಮತ್ತಿತರೆ ರಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ದ್ಯಾಮೇಶ್‌ ಅವರ ಸೇವೆಯನ್ನು ಗುರುತಿಸಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ. 

ಈ ಹಿನ್ನೆಲೆಯಲ್ಲಿ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯಿಂದ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಉಭಯ ಶಾಲೆ ಅಧ್ಯಕ್ಷ ಎಂ. ಬಸವರಾಜಪ್ಪ, ಎಚ್. ಬಸವರಾಜಪ್ಪ, ಕಾರ್ಯದರ್ಶಿ ಬಿ. ವಿರುಪಾಕ್ಷಪ್ಪ, ನಾರದಮುನಿ ಗೌಡ್ರು, ಹಳ್ಳಿಕೇರಿ ರಾಜಣ್ಣ, ಎಂ ಷಡಕ್ಷರಪ್ಪ, ಮಾಗೋಡ್ರು ಕೊಟ್ರೇಶ್, ಮುಖ್ಯ ಶಿಕ್ಷಕಿ ಶಶಿಕಲಾ ಎರಡು ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಾಟಕ ಪ್ರಶಸ್ತಿ ಪುರಸ್ಕೃತ ದ್ಯಾಮೇಶ್ ನಿರ್ದೇಶನದ ಶಿವಯೋಗಿ ಸಿದ್ದರಾಮೇಶ್ವರ ನಾಟಕವನ್ನು ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

error: Content is protected !!