ಸಾಹಿತಿ ಸರೋಜ ನಾಗರಾಜ್ ಕವನ ದಾವಿವಿ ಪಠ್ಯಕ್ಕೆ ಆಯ್ಕೆ

ಸಾಹಿತಿ ಸರೋಜ ನಾಗರಾಜ್ ಕವನ ದಾವಿವಿ ಪಠ್ಯಕ್ಕೆ ಆಯ್ಕೆ

ದಾವಣಗೆರೆ, ಸೆ. 25-  ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಬಿಸಿಎ  ಪ್ರಥಮ ಚಾತುರ್ಮಾಸದ ಕನ್ನಡ ಅರಿವು ಪಠ್ಯ ಪುಸ್ತಕಕ್ಕೆ ಜಿಲ್ಲೆಯ ಹಿರಿಯ ಸಾಹಿತಿ ಶ್ರೀಮತಿ ಕೆ.ಜಿ. ಸರೋಜ ನಾಗರಾಜ್ ಅವರ ಕವನ ಆಯ್ಕೆಯಾಗಿದೆ. 

ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಗ್ರಾಮದವರಾದ  ಸರೋಜ ನಾಗರಾಜ್ ಅವರ ರಚನೆಯ `ಮಂದಿರ ಮಸೀದಿ ನನ್ನದೇ’ ಕವನವನ್ನು ಪಠ್ಯಪುಸ್ತಕದಲ್ಲಿ ಮುದ್ರಿಸಲು ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕ ಕನ್ನಡ ಅಧ್ಯಯನ ಮಂಡಳಿ ನಿರ್ಧರಿಸಿದೆ.

ಈ ಸಂಬಂಧ ಅಧ್ಯಯನ ಮಂಡಳಿ ಅಧ್ಯಕ್ಷ ಡಾ. ಜೋಗಿನಕಟ್ಟೆ ಮಂಜುನಾಥ ಮತ್ತು ಸಂಪಾದಕರಾಗಿರುವ ಚಳ್ಳಕೆರೆಯ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಎ.ಎಸ್.  ಸತೀಶ್ ಅವರು ಕವನ ಪ್ರಕಟಣೆಗೆ ಸರೋಜ ನಾಗರಾಜ್ ಅವರ ಅನುಮತಿ ಪಡೆದಿದ್ದಾರೆ.

ತಮ್ಮ ಬಾಲ್ಯದಿಂದಲೇ ಸಾಹಿತ್ಯದ ಕೃಷಿ ಆರಂಭಿಸಿದ ಸರೋಜ ನಾಗರಾಜ್, ಸಾಹಿತ್ಯ ಕ್ಷೇತ್ರದ ಜೊತೆಗೆ ಹವ್ಯಾಸಿ ಪತ್ರಕರ್ತರೂ ಆಗಿದ್ದಾರೆ. ಅವರ ರಚನೆಯ ಕವಿತೆ ಮತ್ತು ಲೇಖನಗಳು ಜನತಾವಾಣಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಹಲವು ಕೃತಿಗಳನ್ನು ಪ್ರಕಟಿಸಿರುವ ಸರೋಜ ಅವರ ಸಾಹಿತ್ಯ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಸಾಮಾಜಿಕ ಸಂಘಟನೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

error: Content is protected !!