ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧಾಂತ ಸೋಲಿಸುವುದು ಬಿಜೆಪಿ ಗುರಿ : ಡಿಬಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧಾಂತ ಸೋಲಿಸುವುದು ಬಿಜೆಪಿ ಗುರಿ : ಡಿಬಿ

ದಾವಣಗೆರೆ, ಸೆ. 25- ಸಿದ್ಧರಾಮಯ್ಯ ಎಂದರೆ ಒಬ್ಬ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ. ಅದು ಬಿಜೆಪಿ ವಿರೋಧಿ ಸಿದ್ಧಾಂತ. ಹಾಗಾಗಿ ಆ ಸಿದ್ಧಾಂತವನ್ನು ಸೋಲಿಸಬೇಕು ಎಂಬುದು ಬಿಜೆಪಿ ಗುರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಟೀಕಿಸಿದ್ದಾರೆ.

ಯಾವುದೇ  ಕಪ್ಪು  ಚುಕ್ಕೆ ಇಲ್ಲದೆ ನಾಲ್ಕು ದಶಕಗಳ ಕಾಲ ಸಿದ್ದರಾಮಯ್ಯ ರಾಜಕೀಯ ಜೀವನ ನಡೆಸಿದ್ದಾರೆ. ಇಂತಹ ವ್ಯಕ್ತಿ ಬಿಜೆಪಿಯಲ್ಲಿ ಇದ್ದಿದ್ದರೇ ಇಷ್ಟೊತ್ತಿಗಾಗಲೇ  ಸಂಘ ಪರಿವಾರದವರೇ  ದೇವರಂತೆ ಪೂಜಿಸುತ್ತಿದ್ದರು.  ಬಿಜೆಪಿಯಲ್ಲಿ ಬಹುತೇಕರ ವಿರುದ್ಧ ಭ್ರಷ್ಟಚಾರ ಆರೋಪಗಳಿವೆ. ಅವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕು ಇಲ್ಲ. 

ಪ್ರಧಾನಿ ಗಣೇಶನ ಪೂಜೆಗೆ ಸಿ.ಜೆ. ಮನೆಗೆ ಹೋಗುತ್ತಾರೆ ಅದು ತಪ್ಪು ಎಂದು  ಯಾರು ಹೇಳುತ್ತಿಲ್ಲ. ಸಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನೇ ಬುಡ ಮೇಲು ಮಾಡುವ ಕೃತ್ಯ ದೇಶದಲ್ಲಿ ನಡೆಯುತ್ತಿದೆ ಕಿಡಿಕಾರಿದ್ದಾರೆ.

ಸಿದ್ಧರಾಮಯ್ಯ ಕ್ರಿಯಾಶೀಲರಾಗಿ ಇರುವವರೆಗೆ ಕರ್ನಾಟಕದಲ್ಲಿ ಬಿಜೆಪಿಯ ಆಟಗಳು ನಡೆಯೋದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಉಚ್ಛ ನ್ಯಾಯಾಲಯ ನೀಡಿರುವ ತೀರ್ಪು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು ಎಂಬುದನ್ನು ಹೇಳಿದೆ ಅಷ್ಟೇ, ವಿನಃ ಮುಡಾ ವಿಷಯದಲ್ಲಿ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ನೀಡಿದ ತೀರ್ಪಲ್ಲ. ಇದನ್ನು ನಾಡಿನ ಜನರು ಅರ್ಥ ಮಾಡಿಕೊಂಡಿದ್ದಾರೆ.

ಏಳು ಕೋಟಿ ಜನರ ಆಶೀರ್ವಾದವೇ ಸಿದ್ದರಾಮಯ್ಯ ನವರಿಗೆ ಶ್ರೀರಕ್ಷೆ.  ಕಾನೂನು ಮತ್ತು ಸಂವಿಧಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ. 

ಇದು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ಧದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ಧ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. 

ಸಿದ್ದರಾಮಯ್ಯನವರ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಇದೇ ರೀತಿ ಮುಖಭಂಗ ಅನುಭವಿಸುವುದು ಖಂಡಿತ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗಲಿದೆ. ನ್ಯಾಯ, ಸತ್ಯದ ಮೇಲೆ ನಮಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ. 

error: Content is protected !!