ದಾವಣಗೆರೆ, ಸೆ. 25- ಪಂ. ಪುಟ್ಟರಾಜ ಸೇವಾ ಸಮಿತಿ, ಜಿಲ್ಲಾ ಮಹಿಳಾ ಘಟಕ ಹಾಗೂ ವಚನಾಮೃತ ಬಳಗದವರಿಂದ ಶಿಕ್ಷಕರ ದಿನಾಚರಣೆ ಮತ್ತು ಉಭಯ ಗುರುಗಳಾದ ಪುಟ್ಟರಾಜ ಗವಾಯಿಗಳ ಹಾಗೂ ಪಂಚಾಕ್ಷರಿ ಗವಾಯಿಗಳ ಸ್ಮರಣೋತ್ಸವವನ್ನು ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸೌಮ್ಯ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಭಾಗ್ಯಶ್ರೀ ಹುಬ್ಳೀಕರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜುನಾಥ್ ಮಾತನಾಡಿ, ಶರಣ ಸಂಸ್ಕೃತಿ ಉಳಿಯಬೇಕು, ಅದಕ್ಕಾಗಿ ನಾವು ನೀವೆಲ್ಲಾ ಶ್ರಮಿಸಬೇಕು, ವಚನಗಳನ್ನು ಕಲಿಯಬೇಕು ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳ ಗೌರಿ, ಸುಶ್ರಾವ್ಯವಾಗಿ ಹಾಡು ಹೇಳಿ ವಿದ್ಯಾರ್ಥಿಗಳಿಗೆ ಗುರುಗಳ ಜೀವನ ಚರಿತ್ರೆ ತಿಳಿಸಿದರು.
ಮಮತಾ ನಾಗರಾಜ್ ಅವರು ಪ್ರಾಸ್ತಾವಿಕ ನುಡಿಯಲ್ಲಿ ವೇದಿಕೆ ಹಾಗೂ ಬಳಗದ ಚಟುವಟಿಕೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜವಾಬ್ದಾರಿ ಬಗ್ಗೆ ತಿಳಿಸಿದರು.
ಶಾಂತ ಶಿವಶಂಕರ್ ಸ್ವಾಗತಿಸಿದರು. ವಚನಾಮೃತ ಬಳಗದವರಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಮಧುಮತಿ ಗಿರೀಶ್ ಹಾಗೂ ಸೌಮ್ಯ ಬಸರವರಾಜ್‌ವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ದೀಪ ಕಿರಣ್ ನಿರೂಪಿಸಿದರು.
ಶಶಿಕಲಾ ವಾಲಿ, ಶಾಂತ ಶಿವಶಂಕರ್, ಲತಾ ಕಪ್ಪಾಳಿ, ಸುಮಾ ಕೊಟ್ರೇಶ್, ಸತ್ಯಭಾಮ, ಗಿರಿಜಾ ಬಿಲ್ಲಳ್ಳಿ, ಬಳಗದ ಸದಸ್ಯರು ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.