ದಾವಣಗೆರೆ,ಸೆ.25- ಹದಡಿ ವಲಯದ ಬೆಳವನೂರು ಗ್ರಾಮದ ಮರುಳಸಿದ್ದೇಶ್ವರ ಮತ್ತು ದಾನಪ್ಪ ನಗರದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ವಿನಾಯಕ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ರೂ. ಚೆಕ್ಕನ್ನು ನೀಡಲಾಯಿತು. ಬೆಳವನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹೇಂದ್ರನಾಥ, ಮಾಜಿ ಉಪಾಧ್ಯಕ್ಷ ಎಂ.ಪಿ. ನವೀನ್ ಕುಮಾರ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಮಹಾಂತೇಶ್, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್, ಮೇಲ್ವಿಚಾರಕರಾದ ಶಿವಪ್ರಸಾದ್, ದೇವಸ್ಥಾನ ಕಮಿಟಿ ಅಧ್ಯಕ್ಷ ಪ್ರಭುದೇವ, ಉಪಾಧ್ಯಕ್ಷ ನಾಗರಾಜ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
January 10, 2025