ದಾವಣಗೆರೆ, ಸೆ. 24 – ನಗರದ ಯಶಸ್ವಿನಿ ಕ್ರೆಡಿಟ್ ಕೋ-ಆಪ್. ಸೊಸೈಟಿ ಪ್ರಸಕ್ತ ಸಾಲಿನಲ್ಲಿ 11,95,524.51 ರೂ. ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷೆ ಶ್ರೀಮತಿ ಆರತಿ ಕೆ.ಎಸ್. ಸಂತಸ ವ್ಯಕ್ತಪಡಿಸಿದರು.
ಶ್ರೀ ಕೃಷ್ಣ ಕಲಾಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023-24ನೇ ಸಾಲಿನಲ್ಲಿ 1213 ಸದಸ್ಯರಿದ್ದು, ಸೊಸೈಟಿಯು ರೂ. 52.35 ಲಕ್ಷ ಷೇರು ಬಂಡವಾಳ ಹೊಂದಿದೆ. ರೂ. 8.55 ಕೋಟಿ ಠೇವಣಿ ಇದ್ದು, ರೂ.7.82 ಕೋಟಿ ಸಾಲ ನೀಡಲಾಗಿದೆ.
ಈ ಬಾರಿ ಷೇರುದಾರರಿಗೆ ಶೇ.10 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಸಂಸ್ಥಾಪಕರಾದ ರಮೇಶ್.ಬಿ (ಪಿ.ಜೆ.) ಉಪಾಧ್ಯಕ್ಷರಾದ ತಿಪ್ಪಣ್ಣ ಬಿ., ನಿರ್ದೇಶಕರು ಗಳಾದ ಶ್ರೀಮತಿ ನಾಗರತ್ನಮ್ಮ ಶ್ರೀಮತಿ ಎಸ್.ಹೆಚ್. ರೇಣುಕಮ್ಮ, ಹನಮಂತಪ್ಪ ಬಿ., ಕಂಬಣ್ಣ ಹೆಚ್. ರಮೇಶ್ ವೈ. ರೇವಣಸಿದ್ದಪ್ಪ ಸಿ., ಉಮೇಶ್ ಹೆಚ್.ಎಂ., ಎಂ. ಮಂಜುನಾಥ ವಿಶೇಷ ಆಹ್ವಾನಿತರಾದ ಶಿವಣ್ಣ ಮಾಸ್ತರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ್ ಜಿ. ಸಿಬ್ಬಂದಿ ವರ್ಗದವರು ಹಾಗೂ ಷೇರುದಾರರು ಉಪಸ್ಥಿತರಿದ್ದರು.