ದಾವಣಗೆರೆ, ಸೆ. 24 – ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗ ಳವರ 68ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ಶ್ರೀ ಜಯದೇವ ಲೀಲೆ ಪ್ರವಚನವು ನಾಡಿದ್ದು ದಿನಾಂಕ 26, 27, 28, 29 ರಂದು ಪ್ರತಿದಿನ ಸಂಜೆ 6.30 ಕ್ಕೆ ಶಿವಯೋಗಾಶ್ರಮದಲ್ಲಿ ನಡೆಯಲಿದೆ. ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಮಹಾಂತೇಶ ಶಾಸ್ತ್ರೀ (ಸಂತೆಬೆನ್ನೂರು) ಅವರಿಂದ ಪ್ರತಿದಿನ ಪ್ರವಚನ ನಡೆಯಲಿದೆ. ಸ್ಮರಣೋತ್ಸವ ಸಮಾರಂಭವು ದಿನಾಂಕ 30ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ. ರಥೋತ್ಸವ ಸೋಮವಾರ ಮಧ್ಯಾಹ್ನ 4 ಗಂಟೆಗೆ ಜರುಗಲಿದೆ.
ನಗರದಲ್ಲಿ ನಾಳೆಯಿಂದ ಶ್ರೀ ಜಯದೇವ ಲೀಲೆ ಪ್ರವಚನ
