ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಕಾಂಕ್ಷ, ವೀರೇಶ್

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಕಾಂಕ್ಷ, ವೀರೇಶ್

ದಾವಣಗೆರೆ, ಸೆ.23- ಬೆಂಗ ಳೂರು ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ  15ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಆಯ್ಕೆ ಪ್ರಕ್ರಿಯೆಯಲ್ಲಿ ನಗರದ  ಕರಾಟೆ ಕೇಸರಿ ಸಂಸ್ಥೆಯ ಆಕಾಂಕ್ಷ ಆರ್., ವೀರೇಶ್ ಕುಮಾರ್ ಎನ್.ಎ. ಇವರುಗಳು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಆಕಾಂಕ್ಷ ಹಾಗೂ ವೀರೇಶ್, ಕರಾಟೆ ಕೇಸರಿ ಮಾರ್ಷಲ್ ಆರ್ಟ್ಸ್ ಹಾಗೂ ದಾವಣಗೆರೆ ಡಿಸ್ಟ್ರಿಕ್ಟ್ ಕರಾಟೆ ಅಸೋಸಿ ಯೇಷನ್ ತರಬೇತು ದಾರ ಟಿ. ಕುಬೇರನಾಯ್ಕ, ಎಂ. ಜೀವನ್ ಇವರ ಬಳಿ ತರಬೇತಿ ಪಡೆದಿರುತ್ತಾರೆ.

error: Content is protected !!