ರಾಣೇಬೆನ್ನೂರು ದೇವಾಂಗ ಸಂಘದ ಅಧ್ಯಕ್ಷರಾಗಿ ಬಸವರಾಜ ಲಕ್ಷ್ಮೇಶ್ವರ

ರಾಣೇಬೆನ್ನೂರು ದೇವಾಂಗ ಸಂಘದ ಅಧ್ಯಕ್ಷರಾಗಿ ಬಸವರಾಜ ಲಕ್ಷ್ಮೇಶ್ವರ

ರಾಣೇಬೆನ್ನೂರು, ಸೆ. 23 – ಇಲ್ಲಿನ ದೊಡ್ಡಪೇಟೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿಂದು ನಡೆದ ರಾಣೇಬೆನ್ನೂರು ತಾಲ್ಲೂಕು ದೇವಾಂಗ ಸಂಘದ ಸಭೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕರಿಬಸಪ್ಪ ನೀಲಗುಂದ ವಹಿಸಿದ್ದರು. 

ಬಸವರಾಜ ಲಕ್ಷ್ಮೇಶ್ವರ ಅಧ್ಯಕ್ಷರು, ಗುಡದಯ್ಯ ನೀಲಗುಂದ ಉಪಾಧ್ಯಕ್ಷರು, ಗಿರಿಧರ ಗುಳೇದಗುಡ್ಡ ಪ್ರಧಾನ ಕಾರ್ಯದರ್ಶಿ, ಮನೋಹರ ಲಕ್ಷ್ಮೇಶ್ವರ ಕೋಶಾಧ್ಯಕ್ಷರು. ಸಭೆಯಲ್ಲಿ ನೇಕಾರ ಒಕ್ಕೂಟದ ಉಪಾಧ್ಯಕ್ಷ  ಡಾ. ಬಸವರಾಜ ಕೇಲಗಾರ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಸಂಕಪ್ಪ ಮಾರನಾಳ, ಗಣೇಶ ಸಿರಗೂರ, ಗಾಯತ್ರಿ ಸಹಕಾರಿ ಸಂಘದ ಅಧ್ಯಕ್ಷ ನಾಗರಾಜ ಲಕ್ಷ್ಮೇಶ್ವರ, ರಮೇಶ ದುರ್ಗದ ಸೀಮಿ, ಗಣೇಶ ಹಾವನೂರ, ಚಂದ್ರಪ್ಪ ಉದಗಟ್ಟಿ,  ಮಹಿಳಾ ಸಂಘದ ಪ್ರತಿನಿಧಿಗಳಾದ ಶಾರದಾ, ಆನ್ವೇರಿ, ಸುಮಾ ಹಳ್ಳಿಯವರ ಮತ್ತಿತರರಿದ್ದರು.

error: Content is protected !!