ಹರಿಹರ,ಸೆ.23- ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯನ್ನು ಶ್ರದ್ಧಾ – ಭಕ್ತಿ, ಸಡಗರ – ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು.
ಚಿದಂಬರ ಜೋಯಿಸರು ಮತ್ತು ಲಕ್ಷ್ಮೀಕಾಂತ ಜೋಯಿಸರ ನೇತೃತ್ವದಲ್ಲಿ ಗಣಪತಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ಮುಂತಾದ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿ ಗೌರವ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಗಣಪತಿ ವಿಸರ್ಜನೆ ಟ್ರಾಕ್ಟರ್ ಓಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಸಮಾಳ, ಡ್ರಮ್ ಸೆಟ್ ವಾದನ, ಹಲಗೆ, ಡಿಜೆ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ಕಲಾ ಮೇಳಗಳು, ಎಲ್ಲರ ಕೊರಳಿನಲ್ಲಿ ಕೇಸರಿ ಬಣ್ಣದ ಶಾಲುಗಳು ಮೆರವಣಿಗೆಯಲ್ಲಿ ಮೆರಗನ್ನು ತಂದವು. ಯುವಕರು, ಹಿರಿಯರು ಡಿ.ಜೆ.ಸೌಂಡ್ ತಾಳಕ್ಕೆ ಹೆಜ್ಜೆಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು.
ಮೆರವಣಿಗೆ ಗಾಂಧಿ ವೃತದ ಮೂಲಕ ಹಾದು ಮುಖ್ಯ ರಸ್ತೆಯ ಊರಮ್ಮ ದೇವಿ ದೇವಸ್ಥಾನ ಮುಂಭಾಗಕ್ಕೆ ಬರುತ್ತಿದ್ದಂತೆ ವರುಣನ ಆಗಮನದಿಂದ ಕೆಲ ಕಾಲ ಮೆರವಣಿಗೆಯನ್ನು ಸ್ಥಗಿತಗೊಳಿಸಿ ತದನಂತರ ಮಳೆ ನಿಂತ ಮೇಲೆ ಮೆರವಣಿಗೆ ಆರಂಭಿಸಲಾಯಿತು.
ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆ, ಶಿಬಾರ ವೃತ್ತ, ಟಿ.ಬಿ. ರಸ್ತೆಯಲ್ಲಿ ಸಂಚರಿಸಿ, ನಗರಸಭೆ ನಿಗಪಡಿಸಿರುವ ಸ್ಥಳದಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು.
ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಜೆ.ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ ನೋಟದರ್, ಖಜಾಂಚಿ ಮಂಜುನಾಥ್, ಕಾರ್ಯದರ್ಶಿ ಎಂ.ಚಿದಾನಂದ ಕಂಚಿಕೇರಿ, ಕಾಂಗ್ರೆಸ್ ಮುಖಂಡ ನಿಖಿಲ್ ಕೊಂಡಜ್ಜಿ, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಪಿ.ಎನ್. ವಿರುಪಾಕ್ಷಪ್ಪ, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ರೇವಣಸಿದ್ದಪ್ಪ ಅಮ ರಾವತಿ, ದಾದಾಪೀರ್ ಭಾನುವಳ್ಳಿ, ರಮೇಶ್ ಗಿರಣಿ, ನಾಮನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಅರುಣ್ ಕುಮಾರ್ ಬೊಂಗಾಳೆ, ಕೆ.ರವಿಚಂದ್ರ, ಮಲ್ಲೇಶ್ ಕಮಲಾಪುರ, ಶಿಕ್ಷಕ ಬೀರೇಶ್, ತಿಪ್ಪೇಸ್ವಾಮಿ, ಆನಂದ್, ಹೆಚ್ ಶಿವಪ್ಪ, ಸಮಾಳ ಚಂದ್ರಪ್ಪ, ವೈ ರಘುಪತಿ, ಶಿವಕುಮಾರ್ ಮಲೇಬೆ ನ್ನೂರು, ಜಿಗಳಿ ಪ್ರಕಾಶ್, ವೆಂಕಟೇಶ್, ರಟ್ಟಿಹಳ್ಳಿ ವಿಜಯಕುಮಾರ್, ನಾರಾಯಣ್, ಸಂತೋಷ್, ನರೇಂದ್ರ ಕುಮಾರ್ ನಂದಿಗಾವಿ, ಗೋವಿನಾಳ ರಾಜಣ್ಣ, ಆರ್. ಶ್ರೀನಿವಾಸ್, ಕೆ.ಬಿ. ಶಿವಪ್ರಕಾಶ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಿಪಿಐಗಳಾದ ಸುರೇಶ್ ಸಗರಗಿ, ಎಸ್. ದೇವಾನಂದ್, ಪಿಎಸ್ಐ ಗಳಾದ ವಿಜಯಕುಮಾರ್, ಶ್ರೀಪತಿ ಗನ್ನಿ, ಮಂಜುನಾಥ್ ಕುಪ್ಪೇಲೂರು ಗುತ್ತೂರು, ಪ್ರಭು ಕೆಳಗಿನಮನೆ ಮಲೇಬೆನ್ನೂರು , ಎಎಸ್ಐ ಮನಸೂರು, ರಾಜಶೇಖರ್, ಡಿ.ಟಿ ಶ್ರೀನಿವಾಸ್, ಸಿಬ್ಬಂದಿಗಳಾದ ರವಿಕುಮಾರ್, ನಿಂಗರಾಜ್, ರಿಜ್ವಾನ್, ನಾಯ್ಕ್, ಸಿದ್ದೇಶ್, ತಿಪ್ಪೇಸ್ವಾಮಿ, ಹನುಮಂತಪ್ಪ, ಸುಜಾತ, ಕವಿತಾ, ದೇವರಾಜ್, ನಾಗರಾಜ್ ಇತರರು ಸೂಕ್ತ ಬಂದೋಬಸ್ತ್ ಏರ್ಪಾಡು ಮಾಡಿದ್ದರು.