ಮಲೇಬೆನ್ನೂರು : ಬೃಹತ್ ಶೋಭಾಯಾತ್ರೆಯೊಂದಿಗೆ ಹಿಂದೂ ಮಹಾಗಣಪತಿ ವಿಸರ್ಜನೆ

ಮಲೇಬೆನ್ನೂರು : ಬೃಹತ್ ಶೋಭಾಯಾತ್ರೆಯೊಂದಿಗೆ ಹಿಂದೂ ಮಹಾಗಣಪತಿ ವಿಸರ್ಜನೆ

ಸಾಮರಸ್ಯ ಮೆರೆದ ಮುಸ್ಲಿಂ ಬಾಂಧವರು

ಮಲೇಬೆನ್ನೂರು, ಸೆ. 22- ಪಟ್ಟಣದ ನೀರಾವರಿ ಇಲಾಖೆಯ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ 3ನೇ ವರ್ಷದ ಹಿಂದೂ ಮಹಾಗಣಪತಿಯನ್ನು ಬೃಹತ್ ಶೋಭಾಯಾತ್ರೆ ಮೂಲಕ ಶನಿವಾರ ರಾತ್ರಿ ಭದ್ರಾ ನಾಲೆಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಯಿತು.

ನೀರಾವರಿ ಇಲಾಖೆಯಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಮಹಾಗಣಪತಿ ಹಾಗೂ ಶ್ರೀರಾಮನ ಮೂರ್ತಿಗಳನ್ನು ಹೊತ್ತ 2 ಟ್ರ್ಯಾಕ್ಟರ್ ಮತ್ತು ಡಿಜೆಗಳನ್ನು ಹೊತ್ತ 3 ಟ್ರ್ಯಾಕ್ಟರ್‌ಗಳಿದ್ದವು. ಬೆಂಗಳೂರಿನ ತಮಟೆ ಮೇಳ, ಡೊಳ್ಳು, ಗೊಂಬೆ ಕುಣಿತ, ಜಾಂಜ್ ಮೇಳ, ಹಲಗೆ ಸೇರಿದಂತೆ ಇನ್ನಿತರೆ ಕಲಾಮೇಳಗಳು ಶೋಭಾಯಾತ್ರೆಗೆ ಮೆರಗು ತಂದವು.

ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಬಿ.ಎಂ.ವಾಗೀಶ್ ಸ್ವಾಮಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಕೂಡಾ ಡಿಜೆ ಸಂಗೀತಕ್ಕೆ ತಾಳ ಹಾಕಿ ಗಮನ ಸೆಳೆದರು.

ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಮುಸ್ಲಿಂ ಬಾಂಧವರು ಮಹಾಗಣಪತಿಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯಲ್ಲಿದ್ದವರಿಗೆ ನೀರು, ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡುವ ಮೂಲಕ ಸಾಮರಸ್ಯ ಮೆರೆದರು.

ಹಿಂದೂ ಮಹಾಗಣಪತಿ ಸಮಿತಿಯವರು ದಾನಿಗಳ ನೆರವಿನಿಂದ ರೈತ ಭವನದ ಬಳಿ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಇಡೀ ದಿನ ನಿರಂತರವಾಗಿ ನಡೆಯಿತು.

ಪೊಲೀಸ್ ಠಾಣೆ ಕ್ರಾಸ್ ಬಳಿ ಹೆದ್ದಾರಿ ಪಕ್ಕದಲ್ಲಿ ಉದ್ಯಮಿ ಚಿಟ್ಟಕ್ಕಿ ರಮೇಶ್ ಮತ್ತು ಮೇದಾರ್ ರವಿ ಅವರು ಈ ವರ್ಷವೂ 15 ಸಾವಿರ ಲಾಡು ಉಂಡಿಗಳನ್ನು ಜನರಿಗೆ ವಿತರಣೆ ಮಾಡಿದರು.

ಮುಖ್ಯ ವೃತ್ತದ ಬಳಿ ಪೇಟೆ ಬೀದಿ ಗೆಳೆಯರ ಬಳಗದ ಮೆಡಿಕಲ್ ಷಾಪ್ ಎನ್.ಕೆ.ರಾಜೀವ್, ತಳಸದ ಸಂತೋಷ್, ರಂಗನಾಥ ಗುಪ್ತಾ, ಎಂ ಹೆಚ್ ಶರಣ್, ಕಲ್ಮೇಶ್, ತಳಸದ ಭರತ್, ಗಿರೀಶ್, ಮಂಜು ಸೇರಿದಂತೆ ಇನ್ನೂ ಅನೇಕರು ಲೆಮನ್ ರೈಸ್ ವಿತರಿಸಿದರು. ಇದೇ ಮೊದಲ ಬಾರಿಗೆ ಮಹಾಗಣಪತಿಯ ಸಿದ್ಧಿ ಧ್ವಜವನ್ನು ಮುಖ್ಯ ವೃತ್ತದಲ್ಲಿ ಹರಾಜು ಮಾಡಿದ್ದು ವಿಶೇಷವಾಗಿತ್ತು. ಬೆಂಗಳೂರಿನ ಸೂರ್ಯ ಟೆಕ್ನಾಲಜಿಯ ಬಿ. ಅನಿಲ್ ಕುಮಾರ್ ಅವರು 68,101 ರೂಗಳಿಗೆ ಸಿದ್ಧಿ ಧ್ವಜ ಪಡೆದರು.

ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಎಸ್.ರಾಮಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಕಾಂಗ್ರೆಸ್ ಮುಖಂಡ ಹೆಚ್.ಎಸ್.ನಾಗರಾಜ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಬಿಜೆಪಿ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಹನಗವಾಡಿ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಭದ್ರಾ ಕಾಡಾ ಸದಸ್ಯ ಗೋವಿನಹಾಳ್ ರಾಜಣ್ಣ, ಉದ್ಯಮಿ ವೈ.ವಿರೂಪಾಕ್ಷಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಕೆ.ಜಿ.ಲೋಕೇಶ್, ಭೋವಿ ಶಿವು, ಬಿ.ಮಂಜುನಾಥ್, ಬಿ.ವೀರಯ್ಯ, ಎ.ಆರೀಫ್, ಅಲಿ, ಬಿ.ರಫೀಕ್ ಸಾಬ್, ಬಸವರಾಜ್ ದೊಡ್ಮನಿ, ಸಾಬೀರ್ ಅಲಿ, ಭಾನುವಳ್ಳಿ ಸುರೇಶ್, ಎಕ್ಕೆಗೊಂದಿ ಕರಿಯಪ್ಪ, ಶ್ರೀಮತಿ ವಿಜಯಲಕ್ಷ್ಮಿ ಗಂಗಾಧರ್, ಶ್ರೀಮತಿ ಸುಧಾ ರಾಜು, ಭೋವಿಕುಮಾರ್, ಚಮನ್ ಷಾ, ಎಂ.ಬಿ. ರುಸ್ತುಂ, ಬಂಗಾರದ ಅಂಗಡಿ ರಾಜು, ಎಂ.ಹೆಚ್.ಮಹೇಂದ್ರ, ಸುಬ್ಬಿ ರಾಜಣ್ಣ, ಎ.ಕೆ.ಲೋಕೇಶ್, ಪಿ.ಆರ್.ಕುಮಾರ್, ಪಿ.ಹೆಚ್.ಶಿವಕುಮಾರ್, ಕೆ.ಎಂ.ಗಜೇಂದ್ರ ಸ್ವಾಮಿ, ಹೊಸಳ್ಳಿ ಕರಿಬಸಪ್ಪ, ಬಟ್ಟೆ ಅಂಗಡಿ ವಿಶ್ವ, ಎ.ಕೆ.ನಾಗರಾಜ್, ಕಿರಣ್, ಓ.ಜಿ.ಧನು, ದೊರೆ, ಕೆ.ಸಿ.ಚಿದಾನಂದ್, ಆರ್ಟ್ಸ್ ಮಂಜು, ಪೊಲೀಸ್ ಮಂಜು, ಎಸ್ ಕೆ ಕುಮಾರ್, ಸಂಜಯ್, ಕಾರ್ತಿಕ್, ಮನೋಜ್, ಕಡ್ಲೆಗೊಂದಿ ಕೇಶವ, ಲಿಂಗರಾಜ್, ಮೇದಾರ್ ರವಿ ಜಿಗಳಿಯ ಜಿ ಪಿ ಹನುಮಗೌಡ,  ಎಂ.ವಿ. ನಾಗರಾಜ್, ಕೊಮಾರನಹಳ್ಳಿಯ ಮಡಿವಾಳರ ಬಸವರಾಜ್, ಜಿ.ಸುನೀಲ್, ಕುಂಬಳೂರು ವಾಸು, ಬಿ.ಶಂಭುಲಿಂಗಪ್ಪ, ಹರಳಹಳ್ಳಿ ಶ್ರೀನಿವಾಸ್, ಸೇರಿದಂತೆ ಇತರರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಶೋಭಾಯಾತ್ರೆಯ ನೇತೃತ್ವ ವಹಿಸಿದ್ದ ಬಿ.ಎಂ.ವಾಗೀಶ್ ಸ್ವಾಮಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಅಶೋಕ್ ಯರೇಚಿಕ್ಕನಹಳ್ಳಿ, ಖಜಾಂಚಿ ಪಿ.ಆರ್.ರಾಜು, ಚಿಟ್ಟಕ್ಕಿ ನಾಗರಾಜ್ ಅವರು, ಶೋಭಾಯಾತ್ರೆ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ಜರುಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಸಗರಿ, ಕಿರಣ್, ಪಿ.ಎಸ್.ಐ ಪ್ರಭು ಕೆಳಗಿನಮನಿ ಅವರ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

error: Content is protected !!