ದಾವಣಗೆರೆ, ಸೆ. 20 – ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 57ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ವಿನೋಬ ನಗರದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ವಾರ್ಡ್ 16, 17, 22, 24 ರ ನಾಗರಿಕರ ವತಿಯಿಂದ ರಕ್ತದಾನ ಶಿಬಿರವನ್ನು ಇಂದು ಏರ್ಪಡಿಸಲಾಗಿತ್ತು
ಸುಮಾರು 57ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು. ರಕ್ತದಾನವು ಬಹಳ ಶ್ರೇಷ್ಠವಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ ತುಂಬಾ ಸಹಕಾರಿಯಾಗುತ್ತದೆ. ರಕ್ತದಾನ ಮಾಡಿದರೆ ದೇಹದ ಬೆಳವಣಿಗೆಯು ಉತ್ತಮ ರೀತಿಯಲ್ಲಿ ಇರುತ್ತದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಎ. ನಾಗರಾಜ್, ಉಪನ್ಯಾಸಕರಾದ ಶ್ರೀಮತಿ ಲತಿಕಾ ದಿನೇಶ್ ಕೆ. ಶೆಟ್ಟಿ, ಮುಖಂಡರಾದ ಸುರೇಶ್, ಸತೀಶ್, ಮಧು ಪವಾರ್, ಅನಿಲ್, ಬಾರಂಗೆಳ ಬುನಿಯನ್, ಭಾಸ್ಕರ್, ಪ್ರವೀಣ್, ರವಿ, ಸ್ವಾಮಿ, ನಾಗರಾಜ್, ರಾಕೇಶ್, ರವಿಕುಮಾರ್, ರವಿ, ಶಿವಾಜಿ, ರಾಮಚಂದ್ರ, ರಾಯ್ಕರ್, ಸತೀಶ್ ಶೆಟ್ಟಿ, ಯುವರಾಜ್, ರಾಮಚಂದ್ರ, ರಾಜು, ಭಂಡಾರಿ, ಶ್ರೀಕಾಂತ್ ಬಗರೆ ಇನ್ನು ಮುಂತಾದವರು ಇದ್ದರು.