ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಎಂ. ಶಿವಾನಂದಪ್ಪ ಸಂತಸ
ಹರಿಹರ, ಸೆ. 22 – ಇಲ್ಲಿನ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಷೇರುದಾರರು ಮತ್ತು ಆಡಳಿತ ಮಂಡಳಿಯ ಉತ್ತಮ ಸಹಕಾರದೊಂ ದಿಗೆ 254 ಕೋಟಿಗೂ ಹೆಚ್ಚು ವಹಿವಾಟು ನಡೆಸಿ 3 ಕೋಟಿ 99 ಲಕ್ಷದ 60 ಸಾವಿರದ 963 ರೂಪಾಯಿ ನಿವ್ವಳ ಲಾಭವನ್ನು ಗಳಿಸಿದ್ದು, ಷೇರುದಾರರಿಗೆ ಶೇ. 16 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ. ಶಿವಾನಂದಪ್ಪ ಹೇಳಿದರು.
ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಇಂದು ನಡೆದ ದಿ ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 40ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೊಸೈಟಿಯು 31.3.2024ರ ಅಂತ್ಯಕ್ಕೆ 5260 ಸದಸ್ಯರನ್ನು ಹೊಂದಿದ್ದು, ಇದರಲ್ಲಿ 2.616 ಸಹ ಸದಸ್ಯರಿದ್ದಾರೆ. ಇದರಿಂದ 3,9,70, 086 ರೂಪಾಯಿ ಷೇರು ಮೊತ್ತವನ್ನು ಹೊಂದಿರುತ್ತದೆ. 75, 40,04, 431 ರೂಪಾಯಿ ಸಾಲವನ್ನು ನೀಡುವ ಮೂಲಕ 254 ಕೋಟಿಗಳಿಗೂ ಹೆಚ್ಚಿನ ವ್ಯವಹಾರದೊಂದಿಗೆ 65,28 ಕೋಟಿ ರೂಪಾಯಿ ದುಡಿಯುವ ಬಂಡವಾಳವನ್ನು ಹೊಂದಿರುವುದರಿಂದ 3,99,60,963 ದಾಖಲೆಯ ಲಾಭವನ್ನು ಗಳಿಸಿದೆ. ಸಂಘವು ಎ ವರ್ಗದ ಶ್ರೇಣಿಯನ್ನು ಕಾಯ್ದಿರಿಸಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆರ್.ಕೆ. ಮಂಜುನಾಥ್, ನಿರ್ದೇಶಕರಾದ, ಡಿ. ಹೇಮಂತ್ ರಾಜ್, ಜಿ.ಎಸ್. ಚನ್ನಬಸಪ್ಪ, ಸೈಯದ್ ಇಫ್ತೇಕಾರ್ ಆಹ್ಮದ್, ಬಿ. ಮಂಜಪ್ಪ, ಪಿ. ಶಿವಣ್ಣ, ಎಂ. ಹನುಮಂತಪ್ಪ, ಪ್ರಕಾಶ್ ದಿವಟೆ, ಕೆ.ಬಿ. ಮಂಜುನಾಥ್, ಸಂಜಯ್ ಮಂಜುನಾಥ್, ಎಲ್.ಪಿ. ಮಮತ, ಎ.ಬಿ. ಗಂಗಮ್ಮ, ವಿಶೇಷ ಆಹ್ವಾನಿತರಾಗಿ ಕೆ. ಶರಣಪ್ಪ, ಪಾಲಾಕ್ಷಪ್ಪ ಹೆಚ್. ಸಿಬ್ಬಂದಿಗಳಾದ ಜಿ.ಎಂ. ಗಾಯತ್ರಿ, ಎ.ಎನ್. ರಾಧ, ಕೆ. ಲಿಂಗರಾಜ್, ಡಿ.ಇ. ಸಂತೋಷ ಕುಮಾರ್, ಜಿ.ಆರ್. ವಿನಾಯಕ, ಟಿ.ಆರ್. ವಿಶ್ವನಾಥ್, ಪಿಗ್ಮಿ ಸಂಗ್ರಾಹಕರಾದ ಜಿ.ಎಂ. ಮೋಹನ್, ಜಿ.ಹಾಲೇಶಪ್ಪ, ಎಂ.ಬಿ. ಮಹೇಂದ್ರ, ಹೆಚ್.ವಿ. ಆಂಜನೇಯ, ಹೆಚ್.ವೈ. ಮಾರುತಿ, ನಾಗರಾಜ್ ವಿ. ದೇವರಹಳ್ಳಿ, ಎಂ. ಹನುಮಂತಪ್ಪ, ಎನ್.ಎಸ್. ಉಮೇಶ್, ಜಿ.ಕೆ. ಸುರೇಶ್, ಕೆ.ಸಿ. ಶಿವಶಂಕರ್, ಕೆ.ಬಿ. ಶಿವಕುಮಾರ್, ಎನ್.ಸಿ. ವಿಜಯಕುಮಾರ್, ಎಸ್.ಎನ್. ಬಸವರಾಜ್, ಹೆಚ್.ಕೆ. ಮಂಜುನಾಥ್ ಇತರರು ಹಾಜರಿದ್ದರು.
ಸ್ವಾಗತ ಕಾರ್ಯ ನಿರ್ವಾಹಕ ಜಿ.ಬಿ. ಶರತ್, ವಾರ್ಷಿಕ ವರದಿಯನ್ನು ಜಿ.ಎಂ. ಗಾಯತ್ರಿ, ಮಂಡಿಸಿದರು, ಲಾಭ ವಿಂಗಡಣೆ ಎ.ಎನ್. ರಾಧಾ ನಿರೂಪಣೆ ಮಹೇಂದ್ರ ಕುಮಾರ್, ವಂದನಾರ್ಪಣೆ ಎನ್.ಸಿ. ವಿಜಯಕುಮಾರ್ ಮಾಡಿದರು.