ರಾಣೇಬೆನ್ನೂರು, ಸೆ. 21 – ತಾಲ್ಲೂಕಿನ ಹಿರೇಮಾಗನೂರು ವಿವಿದೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ವಜ್ರಮಹೋತ್ಸವವನ್ನ ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘವನ್ನು ಸದಸ್ಯರ ಸಹಕಾರದೊಂದಿಗೆ ಅತ್ಯಂತ ವ್ಯವಸ್ಥಿತವಾಗಿ ಅರವತ್ತು ವರ್ಷಗಳ ಕಾಲ ಮುನ್ನಡೆಸಿಕೊಂಡು ಬಂದಿರುವುದು ಆಡಳಿತ ನಡೆಸಿದವರ ಪ್ರಾಮಾಣಿಕತೆ ಹಾಗೂ ದಕ್ಷತೆ ಕಾರಣವೆಂದು ಹೇಳಿ ಶುಭಕೋರಿದರು.
ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಮಳ್ಳಪ್ಪರ ನಿಂಗಜ್ಜನವರ, ತಿರುಪತಿ ಅಜ್ಜನವರ, ಲಿಂಗರಾಜ ಚಪ್ಪರದಹಳ್ಳಿ, ಜಿಲ್ಲೆ ಸಹಕಾರ ಯುನಿಯನ್ ಅಧ್ಯಕ್ಷ ಶಿವಾನಂದ ಸಂಗಾಪೂರ, ಟಿಎಪಿಸಿಎಂಎಸ್ ಅಧ್ಯಕ್ಷ ಎಲ್ಲಪ್ಪರೆಡ್ಡಿ ರಡ್ಡೇರ, ಕೆಡಿಪಿ ಅಧ್ಯಕ್ಷ ಹನುಮಂತಪ್ಪ ಬ್ಯಾಲದಹಳ್ಳಿ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕರೇಗೌಡ ಬಾಗೂರ, ಕುಪ್ಪೇಲೂರ ಗ್ರಾ.ಪಂ. ಅಧ್ಯಕ್ಷೆ ರೇಖಾ ಮಾದೇನಹಳ್ಳಿ, ಜಟ್ಟೆಪ್ಪ ಮತ್ತಿತರರಿದ್ದರು.
ಸಂಘದ ಕಾರ್ಯದರ್ಶಿ ಜಗದೀಶಗೌಡ ಪಾಟೀಲ್ ಸಂಘದ ವರದಿ ವಾಚನ ಮಾಡಿದರು, ಸಂಘದ ಅಧ್ಯಕ್ಷ ಮಂಜನಗೌಡ ಪಾಟೀಲ ಸ್ವಾಗತಿಸಿ ಇದವರೆಗಿನ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು. ಕೊನೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.