ಮಲೇಬೆನ್ನೂರಿನಲ್ಲಿ ನಾಳೆ ಶೋಭಾಯಾತ್ರೆ

ಮಲೇಬೆನ್ನೂರಿನಲ್ಲಿ ನಾಳೆ ಶೋಭಾಯಾತ್ರೆ

ಮಲೇಬೆನ್ನೂರು, ಸೆ.19- ಪಟ್ಟಣದ ನೀರಾವರಿ ಇಲಾಖೆಯ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ 3ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಬೃಹತ್ ಶೋಭಾಯಾತ್ರೆಯನ್ನು ನಾಡಿದ್ದು ದಿನಾಂಕ 21ರ ಶನಿವಾರ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಅಶೋಕ್ ಯರೇಚಿಕ್ಕನಹಳ್ಳಿ ತಿಳಿಸಿದರು.

ಗುರುವಾರ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭಾಯಾತ್ರೆಗೆ ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 15ರಿಂದ 20 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ದಾನಿಗಳ ನೆರವಿನಿಂದ ಅಂದು ಬೆಳಿಗ್ಗೆ 9 ರಿಂದ ರಾತ್ರಿ 10 ರವರೆಗೂ ನೀರಾವರಿ ಇಲಾಖೆಯ ರೈತ ಭವನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಸಮಿತಿಯ ಖಜಾಂಚಿ ಪಿ.ಆರ್.ರಾಜು ಮಾತನಾಡಿ, 2 ಡಿಜೆ, ಬೆಂಗಳೂರಿನ ರವಿ ಅವರ ತಂಡದಿಂದ ತಮಟೆ ಮೇಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗೊಂಬೆ ಕುಣಿತ, ಡೊಳ್ಳು, ಕಹಳೆ ಮತ್ತು ಹಲಗೆ ಜಾಂಜ್ ಮೇಳದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಮಹಿಳೆಯರಿಗೆ ಪ್ರತ್ಯೇಕವಾಗಿ ಡಿಜೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಸುರಕ್ಷತೆಯ ದೃಷ್ಟಿಯಿಂದ 2 ಡ್ರೋನ್ ಕ್ಯಾಮೆರಾಗಳು ಶೋಭಾಯಾತ್ರೆಯ ವಿಡಿಯೋ ರೆಕಾರ್ಡಿಂಗ್ ಮಾಡಲಿದ್ದು, 500 ಯುವಕರ ಸ್ವಯಂ ಸೇವಕರ ತಂಡವನ್ನು ರಚಿಸಿದ್ದೇವೆ ಎಂದು ಅವರು ಹೇಳಿದರು. 

ವರ್ತಕ ಚಿಟ್ಟಕ್ಕಿ ರಮೇಶ್ ಮತ್ತು ಮೇದಾರ್ ರವಿ ಅವರು ಪೊಲೀಸ್ ಠಾಣೆ ಕ್ರಾಸ್ ಬಳಿ ಹೆದ್ದಾರಿ ಪಕ್ಕದಲ್ಲಿ 15 ಸಾವಿರ ಲಡ್ಡು ಪ್ರಸಾದವನ್ನು ವಿತರಣೆ ಮಾಡಲಿದ್ದಾರೆ.

ಮುಖ್ಯ ವೃತ್ತದ ಬಳಿ ಮೆಡಿಕಲ್ ಶಾಪ್ ಎನ್.ಕೆ.ರಾಜೀವ್, ತಳಸದ ಸಂತೋಷ್, ರಂಗನಾಥ್ ಗುಪ್ತಾ, ಎಂ.ಹೆಚ್.ಶರಣ್ ಮತ್ತಿತರರು ಸೇರಿ ಉಪ ಹಾರದ ವ್ಯವಸ್ಥೆ ಮತ್ತು ನಂದಿಗುಡಿ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಅಲ್ಲಿನ ಜನರು ಉಪಹಾರದ ವ್ಯವಸ್ಥೆ ಏರ್ಪಡಿಸಲಿದ್ದಾರೆ ಎಂದು ಪಿ.ಆರ್.ರಾಜು ಮಾಹಿತಿ ನೀಡಿದರು.

ಪುರಸಭೆ ಸದಸ್ಯ ಬಿ.ಎಂ.ಮಂಜುನಾಥ್ ಮಾತನಾಡಿ, ಶೋಭಾಯಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಆರ್.ಹರೀಶ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್.ರಾಮಪ್ಪ, ಹೆಚ್.ಎಸ್.ಶಿವಶಂಕರ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಬಿ.ಎಂ.ವಾಗೀಶ್ ಸ್ವಾಮಿ, ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಚಿದಾನಂದಪ್ಪ, ಚಂದ್ರಶೇಖರ್ ಪೂಜಾರ್, ಹನಗವಾಡಿ ವೀರೇಶ್, ಹನಗವಾಡಿ ಕುಮಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆ.

ಅನ್ನ ಸಂತರ್ಪಣೆಗೆ ಬಂಗಾರದ ಅಂಗಡಿ ರಾಜಣ್ಣ ಸೇರಿದಂತೆ ಮುಸ್ಲಿ ಸಮಾಜದ ಬಂಧುಗಳೂ ನೆರವು ನೀಡಿದ್ದಾರೆ ಎಂದರು.

ಶೋಭಾಯಾತ್ರೆಯಲ್ಲಿ ಯಾವುದೇ ಧರ್ಮದ ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತೇವೆ. ಯುವಕರು ಮದ್ಯಪಾನ ಮಾಡಿ ಮೆರವಣಿಗೆಗೆ ಬಂದರೆ ಸಹಿಸುವುದಿಲ್ಲ ಎಂದು ಮಂಜುನಾಥ್ ತಿಳಿಸಿದರು.

ಪುರಸಭೆ ಸದಸ್ಯ ಎಕ್ಕೆಗೊಂದಿ ಕರಿಯಪ್ಪ, ಮೇದಾರ್ ರವಿ, ಸುಬ್ಬಿ ರಾಜಣ್ಣ, ಎ.ಕೆ.ಲೋಕೇಶ್, ಹರಳಹಳ್ಳಿ ಶ್ರೀನಿವಾಸ್, ಜಿಗಳಿ ಹನುಮಗೌಡ, ಮಲ್ಲನಾಯಕನಹಳ್ಳಿ ಶೇಖರಪ್ಪ, ಕೊಮಾರನಹಳ್ಳಿ ಸುನೀಲ್, ಗೌಡ್ರ ಶ್ರೀನಿವಾಸ್, ಬಟ್ಟೆ ಅಂಗಡಿ ವಿಶ್ವ, ಲಿಂಗರಾಜ್, ಹೊಸಹಳ್ಳಿ ಕರಿಬಸಪ್ಪ, ಕಾರ್ತಿಕ್, ಸಂಜಯ್, ಎ.ಕೆ.ನಾಗರಾಜ್, ಮನೋಜ್, ಎಸ್.ಕೆ.ಕುಮಾರ್, ಮಲ್ಲಿಕಾರ್ಜುನ್ ಸ್ವಾಮಿ, ಕಡ್ಲೇಗೊಂದಿ ಕೇಶವ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!