ಹರಪನಹಳ್ಳಿಯಲ್ಲಿ ಹಂದಿಗಳ ಹಾವಳಿ ನಿಯಂತ್ರಿಸದ ಪುರಸಭೆ ; ಆಕ್ರೋಶ

ಹರಪನಹಳ್ಳಿಯಲ್ಲಿ ಹಂದಿಗಳ ಹಾವಳಿ ನಿಯಂತ್ರಿಸದ ಪುರಸಭೆ ; ಆಕ್ರೋಶ

ಹರಪನಹಳ್ಳಿ,ಸೆ.19- ಪುರಸಭೆ ವ್ಯಾಪ್ತಿಯ ಸುತ್ತ ಮುತ್ತ ಹಂದಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸದ ಪುರಸಭೆ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. 

ಆದಿ ಬಸವೇಶ್ವರ ನಗರ, ಹರಿಹರ ರಸ್ತೆ, ಆಶ್ರಯ ಮತ್ತು ಆಸರೆ ಕಾಲೋನಿಗಳಲ್ಲಿನ ಜನರು ಹಂದಿಗಳ ಹಾವಳಿಯಿಂದಾಗಿ  ಜೀವನ ನಡೆಸುವುದೇ ಕಷ್ಟಕರ ವಾಗಿದೆ. ಸ್ವಚ್ಛತೆ ಎಂಬುದು  ಇಲ್ಲಿ ಮರೀಚಿಕೆ ಯಾಗಿದೆ.

ಇಡೀ ಪರಿಸರವನ್ನು ಹಂದಿಗಳು ಹಾಳು ಮಾಡುತ್ತಿದ್ದು,  ಜನರು ರೋಗ ರುಜಿನಗಳಗೆ ಬಲಿ ಆಗುತ್ತಿದ್ದಾರೆ. ಸದ್ಯದ  ಪರಿಸ್ಥಿತಿಯಲ್ಲಿ ಮಾರಣಾಂತಿಕ  ಡೆಂಗ್ಯೂ ಮತ್ತು ಮಲೇರಿಯಾ ರೋಗಗಳಿಗೆ   ತುತ್ತಾಗುವ ಭಯದಲ್ಲಿದ್ದಾರೆ.

ತೆರೆದ ಮನೆಗಳಿಗೆ ಏಕಾ ಏಕಿ ನುಗ್ಗುವ ಹಂದಿಗಳು   ಮನೆಯಲ್ಲಿನ  ಆಹಾರ ಪದಾರ್ಥಗಳನ್ನು  ತಿಂದು ಹಾಕು ತ್ತಿವೆ.    ಮನುಷ್ಯರನ್ನು ಕಚ್ಚಿದ ಸನ್ನಿವೇಶಗಳು ಕೂಡ ಇವೆ.  ಈ ಬಗ್ಗೆ ಅನೇಕ ಬಾರಿ ಪುರಸಭೆಗೆ ತಿಳಿಸಿದರೂ  ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಲವಾರು ಬಾರಿ ಹಂದಿಗಳ ಮಾಲೀಕರಿಗೂ ಸಹ  ತಿಳಿಸಿದ್ದರೂ  ಅವರು ಕೂಡ ಕ್ಯಾರೆ ಅನ್ನುತ್ತಿಲ್ಲ.  

ಪುರಸಭೆಯ ಕಸದ ತೊಟ್ಟಿಗಳ ಸಮೀಪ ಹಂದಿಗಳ ಗುಂಪು ಇರುತ್ತದೆ. ಹಂದಿಗಳ ಹಾವಳಿಯಿಂದ ರಸ್ತೆಗಳಲ್ಲಿ ಕಸದ ರಾಶಿಯನ್ನು ಕಾಣಬಹುದು. ಈ ಕಸದ ರಾಶಿ ಯಿಂದ  ಇಡೀ  ಆಶ್ರಯ ಕಾಲೋನಿ ದುರ್ವಾಸನೆ ಬೀರಿದೆ.   

ಹಂದಿಗಳ ನಿಯಂತ್ರಣಕ್ಕೆ ಪುರಸಭೆ ನಿರ್ಲಕ್ಷ್ಯ ವಹಿ ಸಿದೆ ಎಂದು ಪುರಜನರು ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ಇವುಗಳ ನಿಯಂತ್ರಣ ಮಾಡುವಂತೆ ಆಗ್ರಹಿಸಿದ್ದಾರೆ. ಇದೇ ರೀತಿ ಮುಂದುವರೆದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!