ಹರಪನಹಳ್ಳಿ: ಶತಮಾನದ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಔದಾರ್ಯ

ಹರಪನಹಳ್ಳಿ: ಶತಮಾನದ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಔದಾರ್ಯ

ಹರಪನಹಳ್ಳಿ,ಸೆ.18-  ಶತಮಾನ ಪೂರೈಸಿರುವ ಪಟ್ಟಣದ ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  2001-2002 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್, ಪೆನ್ಸಿಲ್ ವಿತರಣೆ  ಮಾಡಿ ಸಂಭ್ರಮಿಸಿದರು. 

ಈ ಶಾಲೆಯಲ್ಲಿ ಓದಿದ ನೆನಪಿಗಾಗಿ ಪ್ರತಿ ವರ್ಷ ನಮ್ಮ ಬ್ಯಾಚ್ ವಿದ್ಯಾರ್ಥಿಗಳು ಮಕ್ಕಳ ಕಲಿಕೆಗೆ ಸಹಾಯಕವಾಗಲು ವಿದ್ಯಾರ್ಥಿಗಳಿಗೆ  ಉಚಿತವಾಗಿ ನೋಟ್ ಬುಕ್ ಹಾಗೂ ಪೆನ್ನು, ಪೆನ್ಸಿಲ್ ವಿತರಿಸುತ್ತೇವೆ ಎಂದು ಹಳೆಯ ವಿದ್ಯಾರ್ಥಿಗಳು ತಿಳಿಸಿದರು.

ಸಿ.ಆರ್.ಪಿ.ಹೆಚ್ ಸಲೀಂ ಹಾಗೂ ಮುಖ್ಯ ಶಿಕ್ಷಕ ಪಾಂಡಪ್ಪ ಬಡಿಗೇರ್ ಮಾತನಾಡಿ‌, ನಿಮ್ಮಂತಹ ವಿದ್ಯಾರ್ಥಿಗಳಿಗೆ ಕಲಿಸಿದ್ದೇವೆ ಎಂದು ಹೇಳಿಕೊಳ್ಳಲು ನಾವು ಹೆಮ್ಮೆ ಪಡುತ್ತೇವೆ. ನೀವು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಅರ್ಥಪೂರ್ಣ. ಇದು ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

error: Content is protected !!