ಹರಿಹರ ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಅಭಿಮತ
ಹರಿಹರ, ಸೆ. 18 – ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವುದರಿಂದ, ನಮ್ಮ ಆರೋಗ್ಯ ಸದೃಢವಾಗುತ್ತದೆ ಎಂದು ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಹೇಳಿದರು.
ನಗರಸಭೆಯ ಆರೋಗ್ಯ ಇಲಾಖೆಯ ವತಿಯಿಂದ ನಗರ ಸಭೆಯ ಪಾರ್ಕ್ ಆವರಣದಲ್ಲಿ ಸ್ವಚ್ಚತಾ ಆಂದೋಲನದಡಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಆರೋಗ್ಯ ಸುಧಾರಣೆ ಆಗಬೇಕಾ ದರೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಚತೆಯಿಂದ ಕೂಡಿರಬೇಕು ಮತ್ತು ಗಿಡ, ಮರಗಳು ಇದ್ದು, ವಾತಾವರಣವು ಹಸಿರಿನಿಂದ ಕೂಡಿದಾಗ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸಹಕಾರಿ ಯಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ಉದ್ಭವಿಸುವುದಿಲ್ಲ. ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಚತೆಯಿಂದ ಇರುವಂತೆ ನೋಡಿಕೊಂಡರೆ ಸದೃಢ ಆರೋಗ್ಯವಂತರಾಗಿ ಉತ್ತಮ ಬದುಕನ್ನು ನಡೆಸಬಹುದು ಎಂದು ಹೇಳಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಸರ್ಕಾರದ ಯೋಜನೆಗಳು ಸರಿಯಾಗಿ ಸದ್ಬಳಕೆಯಾಗುವ ಕೆಲಸ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು ಮಾತನಾಡಿ, ಎಲ್ಲಾ ವಾರ್ಡುಗಳಲ್ಲಿ ಸಸಿಗಳನ್ನು ನೆಡೆಯುವುದರ ಜೊತೆಗೆ ಅವುಗಳನ್ನು ಪೋಷಣೆ ಮಾಡುವಲ್ಲಿ ಮುತುವರ್ಜಿ ವಹಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪಿ.ಎನ್. ವಿರುಪಾಕ್ಷಪ್ಪ, ಅಬ್ದುಲ್ ಅಲಿಂ, ಜೆಡಿಸ್ ಪಕ್ಷದ ಮುಖಂಡ ಮಾರುತಿ ಬೇಡರ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ರವಿಪ್ರಕಾಶ್, ಸಂತೋಷ್ ನಾಯ್ಕ್, ಅಮ್ರೀನ್, ಸಿಬ್ಬಂದಿ ಶಿವಕುಮಾರ್, ತಿಪ್ಪೇಸ್ವಾಮಿ, ಜಿ.ಕೆ. ಪ್ರವೀಣ್, ರಮೇಶ್, ಪರಸಪ್ಪ, ಲತಾ, ಗಾಯಿತ್ರಿ, ರತ್ನಮ್ಮ, ಕೊಟ್ರಮ್ಮ, ಹರ್ಷವರ್ಧನ್, ಮಂಜುನಾಥ್, ಸದಾಶಿವ, ಬಸವರಾಜ್, ಆಂಜನೇಯ, ರವಿಕುಮಾರ್ ಇತರರು ಹಾಜರಿದ್ದರು.