ಮಲೇಬೆನ್ನೂರು, ಸೆ.17- ಕೊಮಾರನಹಳ್ಳಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿ ರುವ ಲಲಿತಮ್ಮ ಮಂಜುನಾಥ್ ಎಂಬುವವರ ಮನೆಯನ್ನು ಮಂಗಳ ವಾರ ಶಾಸಕ ಬಿ.ಪಿ.ಹರೀಶ್ ಅವರು ಟೇಪ್ ಕತ್ತರಿಸಿ, ಹಕ್ಕು ಪತ್ರ ನೀಡಿ, ಗೃಹ ಪ್ರವೇಶ ಮಾಡುವ ಮೂಲಕ ಈ ಯೋಜನೆಯನ್ನು ಹರಿಹರ ತಾಲ್ಲೂಕಿ ನಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿದರು.
ಈ ವೇಳೆ ಹಾಜರಿದ್ದ ತಾ.ಪಂ ಇಓ ಸುಮಲತಾ ಮಾತನಾಡಿ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಹರಿಹರ ತಾಲ್ಲೂಕಿನಲ್ಲಿ ಕಳೆದ ವರ್ಷ 509 ಮನೆಗಳ ನಿರ್ಮಾಣದ ಗುರಿ ಹೊಂದಲಾಗಿತ್ತು. ಇದರಲ್ಲಿ 123 ಮನೆಗಳು ಪೂರ್ಣಗೊಂಡಿದ್ದು, 250 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಪೂರ್ಣಗೊಂಡಿರುವ ಒಂದು ಮನೆಯನ್ನು ಇಂದು ಸಾಂಕೇತಿಕವಾಗಿ ಗೃಹಪ್ರವೇಶ ಮಾಡಲಾಗಿದೆ. ಈ ವರ್ಷ 1029 ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಪಿಡಿಓ ಶ್ರೀನಿವಾಸ್ ಮಾತನಾಡಿ, ಈ ಯೋಜನೆ ಯಡಿ ಹಿರೇಹಾಲಿವಾಣ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ 30 ಮನೆಗಳ ನಿರ್ಮಾಣಕ್ಕೆ ಗುರಿ ಹೊಂದಲಾಗಿದ್ದು, 12 ಎಸ್‍ಸಿ, 1 ಎಸ್‍ಟಿ, 17 ಜನ ಸಾಮಾನ್ಯ ವರ್ಗದವರಿಗೆ ಮನೆಗಳನ್ನು ನಿರ್ಮಾಣ ಮಾಡಲು ಆದೇಶ ಪತ್ರ ನೀಡಲಾಗಿದೆ. ಇದರಲ್ಲಿ ಈಗಾಗಲೇ 27 ಮನೆಗಳ ನಿರ್ಮಾಣ ಪೂರ್ಣಗೊಂಡಿವೆ ಎಂದರು.
ಗ್ರಾ.ಪಂ ಅಧ್ಯಕ್ಷರಾದ ಲಕ್ಷ್ಮೀದೇವಿ ಎಸ್.ಜಿ.ಮಂಜುನಾಥ್, ಉಪಾಧ್ಯಕ್ಷರಾದ ಕಮಲೀಬಾಯಿ ಪರಮೇಶ್‍ನಾಯ್ಕ್, ಜಿ.ಪಂ.ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ತಾ.ಪಂ.ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಡಿವಾಳರ ಬಸವರಾಜ್, ಗ್ರಾ.ಪಂ ಸದಸ್ಯರಾದ ನೇತ್ರಾವತಿ ಹನುಮಂತಪ್ಪ, ದಿಬ್ಬದಹಳ್ಳಿ ಓಂಕಾರಪ್ಪ, ಪಿ.ಸಿ.ಮೋಹನ್, ಗ್ರಾಮದ ಮುಖಂಡರಾದ ದಾನಪ್ಳರ ಹನುಮಂತಪ್ಪ, ಐರಣಿ ಮಹೇಶ್ವರಪ್ಪ, ರಾಮಣ್ಣಸ್ವಾಮಿ, ಜಿ.ರಂಗಪ್ಪ, ಎಸ್.ಡಿ.ರಂಗನಾಥ್, ಹೊಟೇಲ್ ಪರಮೇಶ್ವರಪ್ಪ, ಎಸ್.ಗದಿಗೇಶ್, ಜಿ.ಸುನೀಲ್, ಜಿ.ಪಿ.ಹನುಮಗೌಡ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
ಚಾಲನೆ : ಇದೇ ವೇಳೆ ಶಾಸಕ ಹರೀಶ್ ಅವರು, ಗ್ರಾಮದ ಮುಖ್ಯ ವೃತ್ತದಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.