ಹರಿಹರ, ಸೆ. 17 – ನಗರದಲ್ಲಿ ವಿವಿಧ ಬಡಾವಣೆ ರಸ್ತೆಗಳು ಬಹಳಷ್ಟು ಹಾಳಗಿದ್ದು ರಸ್ತೆ ದುರಸ್ತಿಗೆ ಸರ್ಕಾರ ಹಣವನ್ನು ಬಿಡುಗಡೆ ಮಾಡದೇ, ಇರುವುದಕ್ಕೆ ನಗರೋತ್ತಾನ ಅಭಿವೃದ್ಧಿ ಕಾಮಗಾರಿಯಲ್ಲಿ ಉಳಿದಿರೋ ಹಣದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆ ರಸ್ತೆಯನ್ನು ದುರಸ್ತಿ ಪಡಿಸಲಾಗುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ನಗರಸಭೆ ಸದಸ್ಯ ಎಂ.ಎಸ್. ಬಾಬುಲಾಲ್, ಶಂಕರ್ ಖಟಾವ್ಕಾರ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಜೆಡಿಸ್ ಪಕ್ಷದ ಮುಖಂಡ ಅಂಗಡಿ ಮಂಜುನಾಥ್, ಮಾರುತಿ ಬೇಡರ್, ಹಾಲಸ್ವಾಮಿ, ಬಿಜೆಪಿ ಪಕ್ಷದ ಮುಖಂಡ ಕೆ.ಜಿ. ಕೃಷ್ಣ, ಎನ್.ಇ. ಸುರೇಶ್, ಕಾಂಗ್ರೆಸ್ ಪಕ್ಷದ ಮುಖಂಡ ಸನಾವುಲಾ ಸಾಬ್ ಇತರರು ಹಾಜರಿದ್ದರು.