ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಹೊನ್ನಾಳಿ, ಸೆ. 17- ಮುಖ್ಯಮಂತ್ರಿ ಸಿದ್ಧರಾಮಯ್ಯ  ಹಿಂದುಳಿದ ವರ್ಗಗಳ ನಾಯಕರೆಂಬ ಬೆಂಬಲವಿದೆಯಾದರೂ, ಅವರ ಮೇಲಿರುವ ಮೂಡ ಹಗರಣದ ಆರೋಪ ಸೇರಿದಂತೆ ಭ್ರಷ್ಟಾಚಾರದ ಆಡಳಿತ ನಡೆಸಲು ಮುಂದಾಗಿರುವುದಕ್ಕೆ ಬೆಂಬಲಿಸಲಾಗದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ವೈಪಲ್ಯ, ರಾಜ್ಯ ಸರ್ಕಾರದ ಹಗರಣ, ಬೆಲೆ ಏರಿಕೆ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ, ಸ್ಯಾಂಪ್ ಡ್ಯುಟಿ , ಬೆಲೆ ಏರಿಕೆ ಖಂಡಿಸಿ  ಪಟ್ಟಣದ ಪುವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ ಪಟ್ಟರಾಜ ಗೌಡರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.

ಹಾಲಿನ ಪ್ರೋತ್ಸಾಹ ಧನ ಸುಮಾರು 800 ಕೋಟಿ ರೂ.ಬಿಡುಗಡೆಯಾಗಿಲ್ಲ. ಈ ನಡುವೆ ಹಾಲಿನ ದರ ಏರಿಕೆಯಾಗಿದ್ದರೂ, ಅನೇಕರಿಗೆ ಹಣ ತಲುಪಿಲ್ಲ,  ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿ ವೇಳೆ ಬಿದ್ದ ಮನೆಗಳಿಗೆ 95 ಸಾವಿರ, 3 ಹಾಗೂ 5 ಲಕ್ಷ ಹಣ ಬಿಡುಗಡೆ ಮಾಡಿಸಿದ್ದೆ.ಇನ್ನೂ ಮಳೆಯಿಂದ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಅದಕ್ಕೂ ಸಕಾಲದಲ್ಲಿ ಬೆಳ ಪರಿಹಾರ ನೀಡಿಲ್ಲ ಎಂದು ಗುಡುಗಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಮಾತನಾಡಿ,  ದಲಿತರ ಪರ ಎನ್ನುವ ಕಾಂಗ್ರೆಸ್‌ ಸರ್ಕಾರ ಎಸ್.ಸಿ.ಎಸ್.ಟಿ ಅಹುದಾನವನ್ನು ಬೇರೆ ಕಾರಣಗಳಿಗೆ ಉಪಯೋಗಿಸಿಕೊಂಡಿದ್ದಾರೆ, ಇವರದು ದಲಿತ ವಿರೋಧಿ ಆಡಳಿತವಾಗಿದೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಕಾರ್ಯದರ್ಶಿ ಅನಿಲ್ ನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್‌, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕುಬೇರಪ್ಪ ಮಾತನಾಡಿದರು.

ತಾಲೂಕು ಬಿಜೆಪಿ ಮುಖಂಡರಾದ ಅರಕೆರೆ ನಾಗರಾಜ್‌, ಸಿ. ಆ‌ನಂದ್, ಬೆನಕನಹಳ್ಳಿ ಮಹೇಂದ್ರ, ರಮೇಶ್ ತರಗನಹಳ್ಳಿ, ನ್ಯಾಮತಿ ರವಿಕುಮಾರ್, ಪುರಸಭೆ ಮಾಜಿ ಅಧ್ಯಕ್ಷರಾದ  ರಂಗನಾಥ್, ಬಾಬು ಹೋಬಳದಾರ, ಮಹೇಶ್ ಹುಡೇದ್, ಮಂಜುನಾಥ್, ಇಂಚರ, ಕುಳಗಟ್ಟೆ ರಂಗನಾಥ್, ಸುರೇಂದ್ರನಾಯ್ಕ್ ಮತ್ತಿತರರಿದ್ದರು.

error: Content is protected !!