ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಳೆ ಅನಂತನ ಹುಣ್ಣಿಮೆ

ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಳೆ ಅನಂತನ ಹುಣ್ಣಿಮೆ

ದಾವಣಗೆರೆ, ಸೆ. 16- ನಗರದ ದೇವರಾಜ ಅರಸು ಬಡಾವಣೆ ‘ಎ’ ಬ್ಲಾಕ್‌ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅನಂತನ ಹುಣ್ಣಿಮೆ ಪ್ರಯುಕ್ತ ನಾಡಿದ್ದು ದಿನಾಂಕ 18ರ ಬುಧವಾರ ನವಗ್ರಹ ಹೋಮ, ಶ್ರೀ ಸತ್ಯ ನಾರಾಯಣ ಸ್ವಾಮಿ ‌ಪೂಜಾ ಕಥಾ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ. 

ಗೀತಮ್ಮ ಮತ್ತು ಟಿ. ಚಂದ್ರಶೇಖರ್ ಹೊಸಕುಂದುವಾಡ ಹಾಗೂ ಸಹ ಕುಟುಂಬದವರು  ಸೇವಾಕರ್ತರಾಗಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ವಿವರಿಸಿದ್ದಾರೆ.

error: Content is protected !!