ಹರಪನಹಳ್ಳಿಯ ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯ ಎ.ಆರ್. ಪುಟ್ಟಸ್ವಾಮಿ ವಿಷಾದ
ಹರಪನಹಳ್ಳಿ, ಸೆ. 16 – ಕಂಪನಿ ನಾಟಕಗಳ ಹಾವಳಿಯಿಂದ ಮೂಡಲಪಾಯ ಯಕ್ಷಗಾನದಂತಹ ರಂಗ ಕಲೆಗಳು ಕಣ್ಮರೆಯಾಗುತ್ತಿವೆ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ಎ.ಆರ್. ಪುಟ್ಟಸ್ವಾಮಿ ವಿಷಾದ ವ್ಯಕ್ತ ಪಡಿಸಿದರು.
ಪಟ್ಟಣದ ಎಚ್‌ಪಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಯಕ್ಷಗಾನ ಆಕಾಡಮಿ ಹಾಗೂ ನೈಪುಣ್ಯ ಟ್ರಸ್ಟ್ ಸಹಯೋಗ ದೊಂದಿಗೆ ಮೂಡಲಪಾಯ ಯಕ್ಷ ಗಾನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆ ಭರಾಟೆಯಲ್ಲಿ ಮುಳುಗಿರುವ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಬರೀ ಪಠ್ಯದ ಜ್ಞಾನವನ್ನು ಮಾತ್ರ ನೀಡದೆ ಸಂಗೀತ, ನೃತ್ಯ, ನಾಟಕದಂತಹ ಕಲೆಗಳ ಅರಿವನ್ನು ಮೂಡಿಸಬೇಕು ಎಂದರು.
ಬಯಲಾಟ ಆಕಾಡೆಮೆ ಸದಸ್ಯ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಬಿ. ಪರುಶುರಾಮ ಮಾತನಾಡಿ, ಸಮಾಜವನ್ನು ಸುಂದರವಾಗಿ ರೂಪಿಸಲು ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದ್ದು ಕಲೆ, ಸಾಹಿತ್ಯ, ಸಂಸ್ಕೃತಿ, ರಂಗ ಕಲೆಗಳನ್ನು ಕಲಿತುಕೊಳ್ಳುವ ಅನಿವಾರ್ಯತೆ ಇದೆ. ಅಕ್ಷರ ಶಿಕ್ಷಣಕ್ಕಿಂತ ದೃಶ್ಯ ಮಾದ್ಯಮ ಶಿಕ್ಷಣ ಶ್ರೇಷ್ಠವಾಗಿದ್ದು ವಲಸೆ ಕಲೆಗೆ ಪ್ರೋತ್ಸಾಹ ನೀಡುವ ಬದಲು ದೇಶಿಯ ಕಲೆಗೆ ಅದ್ಯತೆ ನೀಡಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹಾಗೂ ವರದಿಗಾರ ಎ. ನಾಗೇಂದ್ರಪ್ಪ ಮಾತನಾಡಿ, ಸಾಹಿತ್ಯ, ಸಂಗೀತ, ನೃತ್ಯದೊಂದಿಗೆ ಸಂಯೋಜಿತಗೊಂಡಿರುವ ವಿಶಿಷ್ಟ ಜನಪದ ಕಲೆ ಮೂಡಲಪಾಯ ಯಕ್ಷಗಾನ ಇಂದು ವಿನಾಶದ ಅಂಚು ತಲು ಪಿದೆ. ಮೂಡಲಪಾಯಕ್ಕೆ ಅವಿಭಾಜ್ಯ ಅಂಗ ವಾಗಿದ್ದ ಮುಖವೀಣೆ, ಮದ್ದಳೆ, ಭಾಗವತಿಕೆ ಈಗ ಪಳೆಯುಳಿಕೆ ಸ್ಥಿತಿಯಲ್ಲಿದ್ದು ವೃತ್ತಿಪರ ಯಕ್ಷಗಾನ, ಮೇಳ, ಪಾತ್ರಧಾರಿಗಳು, ಭಾಗ ವತರು, ಹಿಮ್ಮೇಳ ಕಲಾವಿದರು ಪಡುವಲ ಪಾಯ ಪ್ರಕಾರವನ್ನು ತೊರೆಯುತ್ತಿದ್ದಾರೆ. ಪಡುವಲಪಾಯಕ್ಕೆ ವಿದ್ಯಾವಂತರು ಪ್ರವೇಶಿಸು ತ್ತಿರುವ ಕಾರಣ ಅದು ಆ ಭಾಗದ ಅಸ್ಮಿತೆಯ ರೂಪ ಪಡೆದುಕೊಂಡಿದೆ. ಪಡುವಲಪಾಯ ದಷ್ಟೇ ಪ್ರಾಚೀನ, ಪೌರಾಣಿಕ ಹಿನ್ನೆಲೆ ಹೊಂದಿರುವ ಮೂಡಲಪಾಯ ಯಕ್ಷಗಾನಕ್ಕೆ ವಿದ್ಯಾವಂತರು ಪದಾರ್ಪಣೆ ಮಾಡುತ್ತಿಲ್ಲ. ಹೀಗಾಗಿ ಅದು ಅಳಿಯುತ್ತಿದೆ ಎಂದರು.
ನೈಪುಣ್ಯ ಟ್ರಸ್ಟ್‌ನ ಸಂಸ್ಥಾಪಕ ಆನಂದ ಕರುವಿನ ಮಾತನಾಡಿ, ಮೂಡಲಪಾಯ ಯಕ್ಷಗಾನದ ಒರಟು ಹೆಜ್ಜೆಗಳನ್ನು ಮಕ್ಕಳಿಗೆ ಕಲಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮೂಡಲಪಾಯದ ಮೂಲಕ್ಕೆ ಧಕ್ಕೆ ಯಾಗದಂತೆ ಹೆಜ್ಜೆಗಳ ಪರಿಷ್ಕರಣೆ ಮಾಡಲಾ ಗಿದ್ದು, ಅದಕ್ಕೆ ಆಧುನಿಕ ರಂಗಭೂಮಿ ನಿರ್ದೇ ಶಕರ ಸಹಾಯ ಪಡೆಯಲಾಗಿದೆ ಎಂದರು.
ಉಪನ್ಯಾಸಕ ರವೀಂದ್ರ ಬಿ.ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಆಕಾಡೆಮೆಯ ನಿವೃತ್ತ ರಿಜಿಸ್ಟರ್ ಜಿ.ಎಸ್. ಶಿವರುದ್ರಪ್ಪ, ಜೀವಜಲ ಟ್ರಷ್ಟ ಸಂಸ್ಥಾಪಕ ಹೇಮಣ್ಣ ಮೋರಗೇರಿ, ವರದಿಗಾರ ಎಸ್. ನಾಗಭೋಷಣ, ಉಪನ್ಯಾಸಕ ಅರುಣನಾಯ್ಕ ಮಾತನಾಡಿದರು. ವೇದಿಕೆಯ ಮೇಲೆ ಉಪನ್ಯಾಸಕ ಶಂಕರಪ್ಪ, ಮಂಜುನಾಥ್, ಮಾಳಗಿ ಸೇರಿದಂತೆ ಇತರರು ಇದ್ದರು.