ದಾವಣಗೆರೆ, ಸೆ.16- ನಗರದ ಗೌಡ ಸಾರಸ್ವತ ಸಮಾಜದ ವತಿಯಿಂದ 49ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಆಚರಿಸಲಾಯಿತು.
ಸಮಾಜದ ಅಧ್ಯಕ್ಷರಾದ ಶ್ರೀಮತಿ ಅಮಿತಾ ಡಾ. ವೇಣುಗೋಪಾಲ್ ಪೈ, ಮಾಜಿ ಅಧ್ಯಕ್ಷ ಗಣೇಶ್ ಶೆಣೈ, ಉಪಾಧ್ಯಕ್ಷರಾದ ನಿತ್ಯಾನಂದ ಕಾಮತ್, ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಮಣ ಭಟ್, ಖಜಾಂಚಿ ಆರ್.ವಿ.ಶೆಣೈ, ಸಹ ಕಾರ್ಯದರ್ಶಿ ಕಿರಣ್‍ಕುಮಾರ್ ಶೆಣೈ, ಸದಸ್ಯರಾದ ರಾಘವೇಂದ್ರ ಕಾಮತ್, ಕೀರ್ತಿ ಕಿಣಿ, ಗಣೇಶ ಜಿ.ತಿಳ್ವೆ, ರೇಖಾ ಡಿ.ಪ್ರಭು, ಉಷಾ ವಾಲಾವಾಲ್ಕರ್ ಮುಂತಾದವರು ಉಪಸ್ಥಿತರಿದ್ದರು.