ಬೆಂಗಳೂರು ರಾಷ್ಟ್ರೋತ್ಥಾನ ಶಾಲೆಗೆ ಸಮಗ್ರ ಪ್ರಶಸ್ತಿ
ದಾವಣಗೆರೆ, ಸೆ. 16 – ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು, ಇಲ್ಲಿನ ಹೊರವಲಯದ ತೋಳಹುಣಸೆಯಲ್ಲಿ ಆಯೋಜಿಸಿದ್ದ ಸಿ.ಬಿ.ಎಸ್.ಇ ದಕ್ಷಿಣ ವಲಯ-2ರ ಈಜು ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ತೋಳಹುಣಸೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆಯಿಂದ ಸೆ.9ರಿಂದ ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ 278 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.
ಕೇರಳದ ಎರ್ನಾಕುಲಂನ ವಿಶ್ವಜ್ಯೋತಿ ಪಬ್ಲಿಕ್ ಸ್ಕೂಲ್ 265 ಅಂಕದೊಂದಿಗೆ ದ್ವಿತೀಯ ಹಾಗೂ ಬೆಂಗಳೂರಿನ ಕೋಣನಕುಂಟೆಯ ದೆಹಲಿ ಪಬ್ಲಿಕ್ ಶಾಲೆಯು 191 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿತು.
11, 14. 17 ಮತ್ತು 19 ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕ ಸೇರಿ ಮಹಾರಾಷ್ಟ್ರ, ಕೇರಳ, ಗೋವಾ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಡಿಯು ಡಾಮನ್‌ನ 578 ಸಿಬಿಎಸ್‌ಇ ಶಾಲೆಗಳ 1500ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವೈಯಕ್ತಿಕ ಬಹುಮಾನ: 11 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ಜ್ಹೋರ್ನಾ ಸಿಸೋಡಿಯಾ, ಬಾಲಕರ ವಿಭಾಗದಲ್ಲಿ ಮೈಸೂರಿನ ಸೇಂಟ್‌ಥಾಮಸ್ ಶಾಲೆಯ ಎಸ್. ರುಥ್ವಾ, 14 ವರ್ಷದೊಳಗಿನ ಬಾಲಕರಲ್ಲಿ ಜೈನ್ ಹೆರಿಟೇಜ್ ಶಾಲೆಯ ಎಸ್. ಶರಣ್, ಶ್ರೀ ಕುಮಾರನ್ ಶಾಲೆಯ ಅದ್ವೈತ ವಂಕಟ ಮಧಿರ, ಬಾಲಕಿಯರ ವಿಭಾಗದಲ್ಲಿ ವ್ಯಾಸ ಇಂಟರ್‌ನ್ಯಾಷನಲ್ ಶಾಲೆಯ ತ್ರಿಶಾ ಸಿಂಧು, 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶ್ರೀ ಕುಮಾರನ್ ಶಾಲೆಯ ಅಂಜಲಿ ಅರುಣ್ ಹೊಸಕೆೇರೆ, ಬಾಲಕರ ವಿಭಾಗದಲ್ಲಿ ಹೆಬ್ಬಾಳ್ ಏರ್‌ಫೋರ್ಸ್ ಶಾಲೆಯ ಸಾಯೀಶ್ ಕಿಣಿ, 19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಎಸ್. ರಾಜುಲಾ, ಬಾಲಕರ ವಿಭಾಗದಲ್ಲಿ ವಿಶ್ವಜ್ಯೋತಿ ಪಬ್ಲಿಕ್ ಶಾಲೆಯ ಜೋಸೆಫ್ ವಿ. ಜೋಸೆ, ದೆಹಲಿ ಪಬ್ಲಿಕ್ ಶಾಲೆಯ ಸೋಹಂ ಮಂಡಲ್ ವೈಯಕ್ತಿಕ ಬಹುಮಾನ ಪಡೆದರು.
ಸಮಾರೋಪ ಸಮಾರಂಭದಲ್ಲಿ ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಬಹುಮಾನ ವಿತರಿಸಿ ಮಾತನಾಡಿ, ಇದೇ ತಿಂಗಳಲ್ಲಿ ಎಸ್.ಎಸ್.ಎನ್.ಪಿ.ಎಸ್ ಶಾಲೆ ಆವರಣದಲ್ಲಿ ಸಿಬಿಎಸ್‌ಇ ಶಾಲಾ ಬಾಲಕರ ಕಬಡ್ಡಿ ಕ್ರೀಡಾಕೂಟ ಹಾಗೂ ಶಿವಗಂಗೋತ್ರಿಯ ಪಿ.ಎಸ್.ಎಸ್.ಇ.ಎಂ.ಆರ್ ಶಾಲೆಯ ಆವರಣದಲ್ಲಿ ಸಿಬಿಎಸ್‌ಇ ಕ್ಲಸ್ಟರ್ 7 ಅಥ್ಲೆಟಿಕ್ಸ್ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದು ಪ್ರಕಟಿಸಿದರು.
ಲೇಖಕ ಎಂ.ಎನ್.ವಿಶ್ವನಾಥ, ಜೆ.ಜೆ.ಎಂ. ಕಾಲೇಜಿನ ಕ್ರೀಡಾ ವಿಭಾಗದ ಡಾ.ಗೋಪಾಲಕೃಷ್ಣ , ಮದ್ರಾಸ್ ಐಐಟಿಯ ಪೌಷ್ಟಿಕ ತಜ್ಞೆ ಗೀತಾಗಲಿಯವರ್, ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಈಜುಪಟು ಕೆ.ಎಸ್.ವಿಶ್ವಾಸ್ ಹಾಗೂ ಸಿಇಒ ಕಾರ್ತಿಕ್ ನಾಗಪುರಿ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.
ಲೇಖಕ ಎಂ.ಎನ್.ವಿಶ್ವನಾಥ, ಜೆ.ಜೆ.ಎಂ. ಕಾಲೇಜಿನ ಕ್ರೀಡಾ ವಿಭಾಗದ ಡಾ.ಗೋಪಾಲಕೃಷ್ಣ , ಮದ್ರಾಸ್ ಐಐಟಿಯ ಪೌಷ್ಟಿಕ ತಜ್ಞೆ ಗೀತಾಗಲಿಯವರ್, ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಈಜುಪಟು ಕೆ.ಎಸ್.ವಿಶ್ವಾಸ್ ಹಾಗೂ ಸಿಇಒ ಕಾರ್ತಿಕ್ ನಾಗಪುರಿ, ಸಿ.ಬಿ.ಎಸ್.ಇ ದಕ್ಷಿಣ ವಲಯ-2, ಈಜು ಕ್ರೀಡಾಕೂಟದ ವೀಕ್ಷಕ ಸಿದ್ದು ಕೆರೆಸೂರ್ ಇತರರಿದ್ದರು.