ಕಮ್ಯುನಿಸ್ಟ್ ಪಕ್ಷಕ್ಕೆ ತುಂಬಲಾರದ ನಷ್ಟ

ಕಮ್ಯುನಿಸ್ಟ್ ಪಕ್ಷಕ್ಕೆ ತುಂಬಲಾರದ ನಷ್ಟ

ಜಗಳೂರಿನಲ್ಲಿ ಯೆಚೂರಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನ್ಯಾಯವಾದಿ ಟಿ.ಬಸವರಾಜ್

ಜಗಳೂರು, ಸೆ. 14-  ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ  ಮೊನ್ನೆ ನಿಧನರಾದ ಮಾಜಿ ಸಂಸದ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ   ಸೀತಾರಾಂ ಯೆಚೂರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ವಕೀಲರ ಸಂಘದ   ಟಿ. ಬಸವರಾಜ್ ಮಾತನಾಡಿ, ಯೆಚೂರಿರವರು ದೇಶದ ಕಾರ್ಮಿಕರು,  ಬಡ ವರ್ಗ ಮತ್ತು ಶೋಷಿತ ವರ್ಗಗಳ  ಧ್ವನಿಯಾಗಿದ್ದರು. ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವಲ್ಲಿ    ಅಪಾರವಾಗಿ ಶ್ರಮಿಸಿದ್ದರು. ಅವರ ಅಗಲಿಕೆ ಕಮ್ಯುನಿಸ್ಟ್  ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ  ಎಂದರು.

ವಿದ್ಯಾರ್ಥಿ ದೆಸೆಯಿಂದಲೇ  ಪ್ರಜಾ ಪ್ರಭುತ್ವ, ಧರ್ಮನಿರಪೇಕ್ಷ, ಜಾತ್ಯಾತೀತ, ಸಂವಿಧಾನದ ಆಶಯಗಳನ್ನು ಸಮಾಜದಲ್ಲಿ  ಸಾಕಾರಗೊಳಿಸಲು    ಹೋರಾಟ ನಡೆಸಿ  ಸರಳ  ಜೀವನ ಸಾಗಿಸಿದರು. ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದು ಅವರು  ಹೇಳಿದರು.

ಪ್ರಾಂಶುಪಾಲ ನಾಗಲಿಂಗಪ್ಪ ಮಾತನಾಡಿ, ಎಡಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಸೀತಾರಾಂ ಅವರ ನಿಧನದಿಂದ  ಎಡಪಂಥೀಯ ಹೊರಾಟಕ್ಕೆ ಹಿನ್ನೆಡೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ನಾಗರಾಜ್,  ಸತೀಶ್ ಮಲೆಮಾಚಿಕೆರೆ, ಮಾದಿಹಳ್ಳಿ ಮಂಜಪ್ಪ, ಅನಂತರಾಜ್, ಮಂಜಣ್ಣ.ಓ, ಧನ್ಯಕುಮಾರ್, ಪವನ್ ಗ್ಯಾಸ್ ಮಾಲೀಕ ಓಬಣ್ಣ, ರಾಜಪ್ಪ ವ್ಯಾಸಗೊಂಡನಹಳ್ಳಿ, ವಕೀಲರಾದ ನಾಗೇಶ್, ಅಂಜಿನಪ್ಪ, ಸಣ್ಣ ಓಬಯ್ಯ ಇದ್ದರು.

error: Content is protected !!