ದಾವಣಗೆರೆ, ಸೆ. 15 – ಅಖಿಲ ಭಾರತ ವೀರಶೈವ ಮಹಾ ಸಭೆಗೆ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪ ಅವರು ನಗರದ ಶ್ರೀಶೈಲ ಮಠಕ್ಕೆ ಇಂದು ಭೇಟಿ ನೀಡಿ, ಶ್ರೀಶೈಲ ಪೀಠದ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.
ಎಸ್ಸೆಸ್ ಅವರು ತಮ್ಮ ಅವಧಿಯಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು, ಮತ್ತಷ್ಟು ಸಮಾಜ ಸಂಘಟನೆ ತಮ್ಮಿಂದಾಗಲಿ ಎಂದು ಜಗದ್ಗುರುಗಳು ಹಾರೈಸಿದರು. ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಡಾ. ಅಥಣಿ ವೀರಣ್ಣ, ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್, ತ್ಯಾವಣಿಗೆ ಮಲ್ಲಿಕಾರ್ಜುನ, ಎನ್.ಎಂ. ತಿಪ್ಪೇಸ್ವಾಮಿ, ಹರೀಶ್, ದೇವರಮನಿ ಯೋಗಿಶ್, ರುದ್ರಮುನಿ, ಬನ್ನಯ್ಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.