ದಾವಣಗೆರೆ, ಸೆ.15- ದೊಡ್ಡಬಾತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇದರ ನಿರ್ದೇಶಕರಾಗಿದ್ದ ಕೆ.ಜಿ.ಬಸವರಾಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ದೊಡ್ದಬಾತಿ ಗ್ರಾಮದ ಕೆ.ಜಿ.ಉಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಂ.ಉಜ್ಜೇಶ್, ಉಪಾಧ್ಯಕ್ಷರಾದ ರೇವಮ್ಮ, ನಿರ್ದೇಶಕರು ಗಳಾದ ಬಿ.ಎಂ.ಶೇಖರಪ್ಪ, ನಾಗರಾಜ ಪಿ.ಎ, ಗಾಯಿತ್ರಮ್ಮ, ಬಿ.ಜಿ.ವಿಶ್ವಾಂಬರ, ಬಿ.ಸಿದ್ದಪ್ಪ, ಹೆಚ್.ಪಿ.ಸಿದ್ದಪ್ಪ, ಹೆಚ್.ಆರ್.ಶಿವಕುಮಾರ್, ಎಂ.ಮರುಳಸಿದ್ದಪ್ಪ, ಎ.ವಿ.ನಾಗರಾಜ್, ಬ್ಯಾಂಕ್ ಪ್ರತಿನಿಧಿ ಜಿ.ವಿ.ಅಭಿಲಾಷ್, ಸಂಘದ ಸಿಬ್ಬಂದಿಗಳಾದ ಮಲ್ಲೇಶಪ್ಪ ಹೆಚ್.ಆರ್. ಹಾಗೂ ಎ.ವಿ.ಸಿದ್ದಪ್ಪ ಅವರುಗಳು ಉಪಸ್ಥಿತರಿದ್ದರು.