ಹರಿಹರ, ಸೆ.15- ನಾಡಿನಲ್ಲಿ ಮಳೆ ಬೆಳೆಗಳು ಸಂಮೃದ್ಧಿಯಾಗಿ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿ ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಊರಮ್ಮ ದೇವಿಗೆ ಪಡ್ಲಿಗೆ ಪೂಜಾ ಕಾರ್ಯವನ್ನು ಮಾಡಲಾಯಿತು.
ಈ ವೇಳೆ ಭಕ್ತರು ಹೋಳಿಗೆ, ಕಡುಬು, ಅನ್ನ, ಮೊಸರು, ಹಾಲು, ಹಣ್ಣು, ಕಾಯಿ ಎಡೆಯನ್ನು ದೇವಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಪೂಜಾರ್ ಶಿವಮೂರ್ತಪ್ಪ, ಅಧ್ಯಕ್ಷ ಸುರೇಶ್ ಚಂದಪೂರ್, ಉಪಾಧ್ಯಕ್ಷ ಎಂ. ಚಿದಾನಂದ ಕಂಚಿಕೇರಿ, ಪ್ರಧಾನ ಕಾರ್ಯದರ್ಶಿ ಕೆ.ಬಿ. ರಾಜಶೇಖರ್, ಖಜಾಂಚಿ ಬೆಣ್ಣೆ ರೇವಣಸಿದ್ದಪ್ಪ, ಸಹ ಕಾರ್ಯದರ್ಶಿಗಳಾದ ಕೆ.ಜಿ. ಗುತ್ಯಪ್ಪ, ರಾಘ ಚೌಗಲೆ, ಹಣಿಗಿ ಸುರೇಶ್, ನಿರ್ದೇಶಕರಾದ ಪರಮೇಶ್ವರಪ್ಪ ನೀಲಗುಂದ, ಹಾವನೂರು ಈರಣ್ಣ, ಸಿಂಗಾಡಿ ಸಿದ್ದಪ್ಪ, ನೀಲಗುಂದ ಜಗದೀಶ್, ಮಜ್ಜಿಗೆ ಚಂದ್ರಪ್ಪ, ಹರಪನಹಳ್ಳಿ ಬಸವರಾಜಪ್ಪ, ದಾವಣಗೆರೆ ಶಿವಾನಂದಪ್ಪ, ಅರ್ಚಕ ನಾಗರಾಜ್ ಪೂಜಾರ್, ಭರಂಪುರ ಯುವಕ ಸಂಘದ ಪದಾಧಿಕಾರಿಗಳಾದ ವೇದ ಮೂರ್ತಿ, ಬೆಣ್ಣೆ ಸಿದ್ದೇಶ್, ಮಂಜುನಾಥ್, ಹಾವ ನೂರು ಶಂಭು, ಹಾಲೇಶ್, ಕೆ.ಬಿ. ಚಂದ್ರು, ಗಿರೀಶ್, ರಾಘವೇಂದ್ರ, ಕೆ.ಬಿ. ಪ್ರಕಾಶ್, ಡಿಶ್ ಶಂಭುಲಿಂಗ ಸ್ವಾಮಿ, ಸಂಜಯ್, ಸಚ್ಚಿನ್, ನಿಕ್ಕಿಲ್, ದರ್ಶನ್, ಚೇತನ್ ಇತರರು ಹಾಜರಿದ್ದರು.