ಸಹಸ್ರಾರ್ಜುನ ಸಹಕಾರಿಗೆ 28 ಲಕ್ಷ ರೂ. ಲಾಭ

ಸಹಸ್ರಾರ್ಜುನ ಸಹಕಾರಿಗೆ 28 ಲಕ್ಷ ರೂ. ಲಾಭ

ಷೇರುದಾರರಿಗೆ
ಶೇ. 13 ಡಿವಿಡೆಂಡ್ :
ಅಧ್ಯಕ್ಷ ರಾಘವೇಂದ್ರ ಮೆಹರ್ವಾಡೆ ಘೋಷಣೆ 

ಹರಿಹರ, ಸೆ.15-  ಷೇರುದಾರರು ಮತ್ತು ಆಡಳಿತ ಮಂಡಳಿಯ ಉತ್ತಮ ಸಹಕಾರದಿಂದಾಗಿ ಈ ಬಾರಿ 28 ಲಕ್ಷ ರೂ.  ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ  ಶೇ. 13 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಹಸ್ರಾರ್ಜುನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ  ಆರ್.ಎಂ‌ ರಾಘವೇಂದ್ರ ಮೆಹರ್ವಾಡೆ ಹೇಳಿದರು.

ನಗರದ ಕಾಟ್ವೆ ಭವನದಲ್ಲಿ ನಿನ್ನೆ ನಡೆದ  ಸೊಸೈಟಿಯ 25 ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ  ವಹಿಸಿ ಅವರು ಮಾತನಾಡಿದರು.

ಸೊಸೈಟಿಯು 1373 ಸದಸ್ಯರು ಮತ್ತು 261 ಸಹ ಸದಸ್ಯರನ್ನು ಹೊಂದಿದ್ದು, 91.38 ಕೋಟಿ ರೂ.   ಷೇರು ಬಂಡವಾಳ ಹೊಂದಿದೆ. 4.92 ಕೋಟಿ   ಠೇವಣಿ  ಸಂಗ್ರಹವಾಗಿದ್ದು. 6.90 ಕೋಟಿ ರೂ.  ಸಾಲವನ್ನು ನೀಡಲಾಗಿದೆ. 20.90 ಲಕ್ಷ  ರೂಪಾಯಿ ಅವಧಿ ಮೀರಿದ ಸಾಲದ ಬಾಕಿ ಇದೆ.  ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು,   ಸೊಸೈಟಿ ಏಳಿಗೆಗಾಗಿ ಶ್ರಮಿಸಿರುವ ಎಲ್ಲರಿಗೂ ಧನ್ಯವಾದ  ಹೇಳುವುದಾಗಿ ತಿಳಿಸಿದರು. ವಾರ್ಷಿಕ ವರದಿಯನ್ನು ಕಾರ್ಯ ನಿರ್ವಾಹಕರಾದ ಶ್ರೀಮತಿ ನಂದಾ ವಿ. ಕಾಟ್ವೆ ಸಭೆಯಲ್ಲಿ ಮಂಡಿಸಿದರು.  

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೃಷ್ಣಸಾ ಆರ್. ಪೂಜಾರಿ, ನಿರ್ದೇಶಕರಾದ ಬಿ. ರೇವಣಸಾ, ರಮೇಶ್ ಎಸ್ ಕಾಟ್ವೆ,  ಸೇವಂತಿ ಕೆ. ಭೂತೆ,  ನಾರಾಯಣ ಸಾ ಗುಜರಾತಿ, ತುಳಜಾರಾಮ್ ಎಂ., ಕು.ಶೋಭಾದೇವಿ ವಿ.ಎಂ., ಮೋಹನ್ ಟಿ.ಎಂ., ವಿಠಲ್ ಎಂ. ಭೂತೆ, ಶಶಿಧರ್ ಡಿ. ಆನ್ವೇರಿ, ಎನ್.ಟಿ. ಪರುಶುರಾಮ್, ಗಣ್ಯರಾದದ ಕೃಷ್ಣ ಸಾ ಭೂತೆ, ಪರುಶುರಾಮ್ ಕಾಟ್ವೆ, ಮನೋಹರ ಸಾ. ಸೊಳಂಕಿ, ತುಳಜಪ್ಪ ಭೂತೆ, ಆಡಿಟರ್ ಉಮೇಶ್ ಶೆಟ್ಟಿ, ಸಿಬ್ಬಂದಿ  ವರ್ಗದ  ಅನಿತಾ ಎಸ್. ಎಂ., ಅನಿಲ್ ಕುಮಾರ್ ಹೆಚ್.ಪಿ., ರಾಕೇಶ್ ವಿ.ಎಂ., ಸೂರಜ್ ಇ, ಪಿಗ್ಮಿ ಸಂಗ್ರಾಹಕರಾದ ಬಸವರಾಜ್ ಎಲ್.ಹೆಚ್., ನಂದಕುಮಾರ್ ಎಂ.ಕೆ, ಪ್ರಶಾಂತ್ ಕುಮಾರ್ ಬಿ., ರಘುವೀರ್ ಎನ್.ಕೆ ಇತರರು ಹಾಜರಿದ್ದರು.  

ನಂದಾ ವಿ ಕಾಟ್ವೆ ಸ್ವಾಗತಿಸಿದರು.  ನಿರೂಪಣೆ ಅನಿಲ್ ಪವಾರ್ ನಿರೂಪಿಸಿದರು. ಉಪಾಧ್ಯಕ್ಷ ಕೃಷ್ಣ ಸಾ ಪೂಜಾರಿ ವಂದಿಸಿದರು. 

error: Content is protected !!