ದಾವಣಗೆರೆ, ಸೆ. 11 – ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ದೂಡಾ ಸದಸ್ಯರ ಕೊಠಡಿಯಲ್ಲಿ ಇಂದು ಸಾರ್ವಜನಿಕರ ಕುಂದು – ಕೊರತೆಗಳನ್ನು ಸ್ವೀಕರಿಸಿದರಲ್ಲದೆ, ತತ್‌ಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನಾಗರಿಕರನ್ನು ಅಲೆದಾಡಿಸದೇ ತಕ್ಷಣ ಕೆಲಸಗಳನ್ನು ಮಾಡಿಕೊಡುವಂತೆ ಅವರು ನಿರ್ದೇಶಿಸಿದರು.
January 8, 2025