ರಾಣೇಬೆನ್ನೂರು, ಸೆ. 11 – ಇಲ್ಲಿನ ವಾಗೀಶ ನಗರದ ವೀರಭದ್ರಸ್ವಾಮಿ ಜಯಂತ್ಯೋತ್ಸವದ ಪ್ರಯುಕ್ತ ಬಸ್ ಸ್ಟ್ಯಾಂಡ್ ರಸ್ತೆಯ ಈಶ್ವರ ದೇವಸ್ಥಾನದಿಂದ ಸ್ವಾಮಿಯ ಮೂರ್ತಿಯ ಪಲ್ಲಕ್ಕಿ ಉತ್ಸವ ಐರಣಿ ಹೊಳೆ ಮಠದ ಆನೆ ಶ್ರೀಗೌರಿ ಮೇಲೆ ಅತ್ಯಂತ ಸಡಗರ ಸಂಭ್ರಮದೊಂದಿಗೆ ನಡೆಸಲಾಯಿತು. ಕಮಿಟಿಯ ಭಕ್ತರಾದ ಬಸವರಾಜ ಪಟ್ಟಣ ಶೆಟ್ಟಿ, ಜಿ.ಜಿ. ಹೊಟ್ಟಿಗೌಡ್ರ, ಬಾಬು ಐರಣಿ ಶೆಟ್ರು, ಮಾಜಿ ಶಾಸಕ ಅರುಣಕುಮಾರ ಪೂಜಾರ, ಪುಟ್ಟು ಅಂಗಡಿ, ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ನಾಗರಾಜ ಪಟ್ಟಣ ಶೆಟ್ಟಿ, ನಾಗರಾಜ ಮೋಟಗಿ, ವೀರೇಶ ಮೋಟಗಿ ಭಾಗವಹಿಸಿದ್ದರು. ಕೊನೆಯಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು.
ರಾಣೇಬೆನ್ನೂರು : ಆನೆ ಮೇಲೆ ವೀರಭದ್ರಸ್ವಾಮಿ ಪಲ್ಲಕ್ಕಿ ಉತ್ಸವ
