ಹರಿಹರ, ಸೆ.10- ನಗರದ ತುಂಗಭದ್ರಾ ಲಾರಿ ಚಾಲಕರ ಶ್ರೇಯೊಭಿವೃದ್ಧಿ ಸಂಘದ ವತಿಯಿಂದ ಪ್ರಥಮ ವರ್ಷದ ಗಣೇಶೋತ್ಸವ ಆಚರಿಸಲಾಯಿತು.
ಹಿಂದೂ- ಮುಸ್ಲಿಂ ಸಮಾಜದವರು ಸೇರಿ ಭಾವೈಕ್ಯತೆಯ ಸಂಕೇತವಾಗಿ ಸಂಘದ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಾಜು ಬಸಪ್ಪ, ಅಧ್ಯಕ್ಷ ಸೈಯದ್ ಯೂಸೂಫ್, ಉಪಾಧ್ಯಕ್ಷ ಫಯಾಜ್ ಅಹಮದ್, ಕಾರ್ಯದರ್ಶಿ ಜಂಬಯ್ಯ ಮಡಿವಾಳ, ಜಕಾವುಲ್ಲಾ, ವಾಸು ಪಾಂಡು, ಶಶಿ ನಾಯಕ್, ದಾದಾಪೀರ್, ಹೈದರ್‌ಅಲಿ, ಮುಜೀಬ್‌ಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.