ವೀರಶೈವ ಸಂಸ್ಕೃತಿಯ ಉಳಿವು – ಬೆಳವಣಿಗೆಗಾಗಿ ಗುರುಕುಲ ಸ್ಥಾಪನೆ

ವೀರಶೈವ ಸಂಸ್ಕೃತಿಯ ಉಳಿವು – ಬೆಳವಣಿಗೆಗಾಗಿ ಗುರುಕುಲ ಸ್ಥಾಪನೆ

ರಾಮದುರ್ಗ, ಸೆ. 10 – ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದದ್ದು ಉತ್ಕೃಷ್ಟ ಸಂಸ್ಕೃತಿ ಹೊಂದಿದೆ. ಇದರ ಉಳಿವು ಮತ್ತು ಬೆಳವಣಿಗೆಗಾಗಿ ಗೊಡಚಿ ವೀರಭದ್ರೇಶ್ವರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರು ಕುಲ ಪ್ರಾರಂಭಕ್ಕೆ ಉದ್ದೇಶಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ತಾಲ್ಲೂಕಿನ ಗೊಡಚಿ ಶ್ರೀ ವೀರ ಭದ್ರೇಶ್ವರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಮತ್ತು ಸಭಾ ಭವನದ ಶಿಲಾನ್ಯಾಸ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾ ಗಿದೆ. ಶ್ರೀ ಜಗದ್ಗುರು ರೇಣುಕಾ ಚಾರ್ಯರು ಬೋಧಿಸಿದ ಶಿವಾದ್ವೈತ ತತ್ವ ಸಿದ್ಧಾಂತ ಜೀವಾತ್ಮ ಪರಮಾತ್ಮ ನೆಡೆಗೆ ಸಾಗಲು ಸಹಕಾರಿಯಾಗಿದೆ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಅರಿವು, ಆಚರಣೆ ಇಲ್ಲದ ಕಾರಣ ಜೀವನದಲ್ಲಿ ತೊಳಲಾಟವನ್ನು ಕಾಣುತ್ತೇವೆ. ಈ ಕೊರತೆಯನ್ನು ಪರಿಹಾರ ಮಾಡಲು ಗುರುಕುಲ ಮಾದರಿಯ ಶಿಕ್ಷಣ ಈ ಸಂಸ್ಕೃತಿಯ ಉಳಿವಿಗೆ ಮುಖ್ಯ ವಾಗಿದೆ. ಆದ್ದರಿಂದ ಪಾಟೀಲ ಬಂಧುಗಳು ಶ್ರೀ ರಂಭಾಪುರಿ ಪೀಠಕ್ಕೆ ದಾನ ಮಾಡಿದ ಒಂದು ಎಕರೆ ನಿವೇಶನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ, ಗುರುಕುಲ ಹಾಗೂ ಸಭಾ ಭವನದ ಕಟ್ಟಡಗಳನ್ನು ಹಂತ – ಹಂತವಾಗಿ ಸಂಪೂರ್ಣವಾಗಿ ಪೂರ್ಣ ಗೊಳಿಸುವ ಸದಿಚ್ಛೆ ತಮಗಿದೆ ಎಂದರು. 

ಇಲ್ಲಿಯ ಕಾರ್ಯ ಚಟುವಟಿಕೆ ಗಳನ್ನು ನಿರ್ವಹಿಸಿಕೊಂಡು ಹೋಗಲು ಎಂ. ಚಂದರಗಿ ಮತ್ತು ಕಟಕೋಳ ಹಿರೇಮಠದ ಶ್ರೀ ವೀರಭದ್ರ ಶಿವಾ ಚಾರ್ಯ ಸ್ವಾಮಿಗಳನ್ನು ಸಂಚಾಲಕರ ನ್ನಾಗಿ ನಿಯುಕ್ತಿಗೊಳಿಸಿದ್ದೇವೆ ಎಂದರು. ಈ ವರ್ಷ ಗದಗ ಜಿಲ್ಲೆ ರೋಣ ತಾಲ್ಲೂಕು ಅಬ್ಬಿಗೇರಿಯಲ್ಲಿ ಶ್ರೀ ರಂಭಾ ಪುರಿ ಪೀಠದ ದಸರಾ ಮಹೋತ್ಸವ ಜರುಗಲಿದೆ ಎಂದು ತಿಳಿಸಿದರು.

ಸಸಿಗೆ ನೀರೆರೆದು ಸಮಾರಂಭ ಉದ್ಘಾಟಿಸಿದ ಬೆಳಗಾವಿ ಸಂಸದರೂ ಹಾಗೂ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಭಾರತೀಯ ತತ್ವಜ್ಞಾನ ಹಾಗೂ ಮಠಗಳ ಪರಂಪರೆ ಬಹಳ ಪ್ರಾಚೀನವಾದುದು. 

ಇವತ್ತಿನ ಆಧುನಿಕ ಕಾಲದಲ್ಲಿ ಸಂಸ್ಕೃತಿ ಆಚರಣೆ ಮರೆತು ಭಿನ್ನ ದಾರಿಯಲ್ಲಿ ನಡೆದು ಮಾನಸಿಕ ಶಾಂತಿ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವೀರಶೈವ ಧರ್ಮ ಸಂಸ್ಕೃತಿಯ ಬೆಳವಣಿಗೆಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಗುರುಕುಲ ಮತ್ತು ಸಮುದಾಯ ಭವನ ನಿರ್ಮಿಸುತ್ತಿರುವುದು ಈ ಭಾಗದ ಭಕ್ತರ ಸೌಭಾಗ್ಯವಾಗಿದೆ. 

ವಿಧಾನ ಪರಿಷತ್ತಿನ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಅವರು ಈ ಕಾರ್ಯಕ್ಕೆ 5 ಲಕ್ಷ ರೂ. ದಾನವಾಗಿ ಕೊಡುವ ಭರವಸೆಯಿತ್ತರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ತಮ್ಮ ಮಠದಿಂದ ಕಟ್ಟಡಕ್ಕೆ 5 ಲಕ್ಷ ರೂ.ಕೊಡುವುದಾಗಿ ತಿಳಿಸಿದರು. 

ಮಲ್ಲಣ್ಣ ಯಾದವಾಡ ಸವಿಸ್ತಾರ ವಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.   ಮಹಾಂತೇಶ ಶಾಸ್ತ್ರಿ, ಟಿ.ಪಿ. ಮನೋಳಿ, ಎಸ್.ಬಿ. ಹಿರೇಮಠ, ಎಂ. ಕೊಟ್ರೇಶಪ್ಪ ಮೊದಲ್ಗೊಂಡು ಹಲವಾರು ಗಣ್ಯರು ಇದ್ದರು. ಬೀಳಗಿ ರಾಜೇಶ ಸ್ವಾಗತಿಸಿ ದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

error: Content is protected !!