ದಾವಣಗೆರೆ, ಸೆ.10- ಕಳ್ಳತನವಾಗಿದ್ದ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಸೆ.7ರಂದು ರಮೇಶ್ ಜೆ.ವತನ್ ಎಂಬುವವರು ಕೆ.ಬಿ. ಬಡಾವಣೆಯಲ್ಲಿ ತಮ್ಮ ಬೈಕ್ ಕಳ್ಳತನವಾದ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಪತ್ತೆಗೆ ಕಾರ್ಯಾಚರಣೆ ಗೊಂಡ ಪೊಲೀಸರು, ಭೂಮಿಕಾ ನಗರ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕೆಟಿಜೆ ನಗರ ಪೊಲೀಸ್ ಠಾಣೆಯ 2 ಬೈಕ್, ಭರಮಸಾಗರ ಠಾಣೆಯ 1 ಹಾಗೂ ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಬಳಿ ಕಳ್ಳತನ ಮಾಡಿದ್ದ 1 ಬೈಕ್ ಸೇರಿ 4 ಬೈಕ್ಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ಪತ್ತೆ ಕಾರ್ಯದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್. ಹೆಚ್.ಎಸ್., ಪಿ.ಎಸ್.ಐ ಸಾಗರ ಅತ್ತರವಾಲಾ ಹಾಗು ಸಿಬ್ಬಂದಿಗಳಾದ ಸುರೇಶ್ ಬಾಬು, ಪ್ರಕಾಶ ಟಿ, ಮಹಮದ್ ರಫಿ, ಗಿರೀಶ್ ಗೌಡ, ಶಿವರಾಜ್ ಎಮ್ ಎಸ್, ಪುರುಷೋತ್ತಮ, ಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ, ಗೀತಾ ಇದ್ದರು.