ದಾವಣಗೆರೆ, ಸೆ.10- ನಗರದ ಮಾಗನೂರು ಬಸಪ್ಪ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ, ಉತ್ತಮ ಸಾಧನೆಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಎಂ. ಪರ್ಣಿಕ (ಪ್ರಥಮ), 200 ಮೀ. ಓಟದ ಸ್ಪರ್ಧೆಯಲ್ಲಿ ಎಂ.ಆರ್. ವಿದ್ಯಾ (ಪ್ರಥಮ) ಹಾಗೂ ಟೆನ್ನಿಕಾಯ್ಟ್ ಸ್ಪರ್ಧೆಯಲ್ಲಿ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ಡಿಸ್ಕಸ್ ಥ್ರೋ ಕ್ರೀಡೆಯಲ್ಲಿ ಕೆ.ಎಂ. ಲಿಖಿತಾನಂದ (ತೃತೀಯ), ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಆರ್. ಪುನೀತ್ (ತೃತೀಯ), ನಡಿಗೆ ಸ್ಪರ್ಧೆಯಲ್ಲಿ ಎ. ಅಜಯ್ (ತೃತೀಯ) ಹಾಗೂ ಬಾಲಕಿಯರ 100ಮೀ ಓಟದಲ್ಲಿ ಎಂ.ಆರ್. ವಿದ್ಯಾ ತೃತೀಯ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
January 16, 2025